ಕಾಟಿಪಳ್ಳ ಮಸೀದಿಗೆ ಬಿಯರ್ ಬಾಟ್ಲಿ ಎಸೆತ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಹೊರವಲಯದ ಕಾಟಿಪಳ್ಳ ಜಂಕ್ಷನ್ ಬಳಿ ಇರುವ ಮಸೀದಿಗೆ ಕಿಡಿಗೇಡಿಗಳು ಕಲ್ಲೆಸೆತ ನಡೆಸಿದ್ದಾರೆ. ನಗರದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಮತ್ತೆ ಕುಮ್ಮಕ್ಕು ನೀಡುವ ನಿಟ್ಟಿನಲ್ಲಿ ಈ ಘಟನೆ ನಡೆದಿದೆಯೇನೋ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಕಾಟಿಪಳ್ಳ ಜಂಕ್ಷನ್ನಿನಲ್ಲಿರುವ ಪಣಂಬೂರು ಮುಸ್ಲಿಂ ಜಮಾಅತ್ ಮೊದಿನ್ ಜುಮ್ಮಾ ಮಸೀದಿಗೆ ಕಿಡಿಗೇಡಿಗಳು ಬಿಯರ್ ಬಾಟ್ಲಿಗಳನ್ನು ಎಸೆದಿದ್ದು, ಇದು ಒಡೆದು ಚೂರಾಗಿ ಮಸೀದಿಯೊಳಗೆ ಬಿದ್ದಿದೆ. ಮುಂಜಾನೆ ನಮಾಜಿಗೆ ಬಂದವರಿಗೆ ಈ ವಿಚಾರ ಗೊತ್ತಾದ ಬಳಿಕ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.