ಕಾರ್ಕಳದಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ರಾಜ್ಯ ಸರಕಾರವು ಬೀಡಿ ಕಾರ್ಮಿಕರಿಗೆ ನೀಡಲು ಬಾಕಿಯಿರುವ ಎರಡು ವರ್ಷಗಳ ತುಟ್ಟಿಭತ್ಯೆಯನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿ ಬೀಡಿ ಕಾರ್ಮಿಕರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಆನೆಕೆರೆಯಿಂದ ಮೆರವಣಿಗೆ ನಡೆಸಿ ಪೈಲ್ವಾನ್ ಬೀಡಿ ಕಂಪೆನಿಯ ಎದುರು ಸೇರಿ ಮನವಿ ಸಲ್ಲಿಸಿದರು.