ಬೀಡಿ ಗುತ್ತಿಗೆದಾರರ ಮುಷ್ಕರ ಆರಂಭ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಭಾರತ್ ಬೀಡಿಯ ಕುಂಬಳೆ, ನಾಯ್ಕಾಪು ಬ್ರಾಂಚ್ ಕಚೇರಿ ಮುಂಭಾಗದಲ್ಲಿ ಗುತ್ತಿಗೆದಾರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಸೋಮವಾರ ಬೆಳಗ್ಗೆ ಆರಂಭಿಸಿದರು.

ಕಳೆದ ಎಪ್ರಿಲ್ ತಿಂಗಳಿನಿಂದ ಕಮಿಷನ್ ಹೆಚ್ಚಿಸುವುದಾಗಿ ಮೆನೇಜ್ಮೆಂಟ್ ಭರವಸೆ ಪಾಲಿಸದ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲಾಗುತ್ತಿದೆ.

ಕರ್ನಾಟಕ ಕೇಂದ್ರವಾಗಿರುವ ಭಾರತ್ ಬೀಡಿ, ಗಣೇಶ್ ಬೀಡಿ, ಪೈಲ್ವಾನ್ ಬೀಡಿ ಕಂಪೆನಿಗಳ ಕಾಂಟ್ರಾಕ್ಟರುಗಳು ಮುಷ್ಕರ ಹೂಡುತ್ತಿದ್ದಾರೆ. ಈ ಬೀಡಿ ಕಂಪೆನಿಗಳಿಗೆ ರಾಜ್ಯದಲ್ಲಿ ಮಂಜೇಶ್ವರ, ಕುಂಬಳೆ, ಕಾಸರಗೋಡು, ಕಾಂಞಂಗಾಡ್ ಮೊದಲಾದೆಡೆಗಳಲ್ಲಿ ಬ್ರಾಂಚ್ ಇದೆ. ಕುಂಬಳೆ, ನಾಯ್ಕಾಪು ಬ್ರಾಂಚಿನಿಂದ ಗುತ್ತಿಗೆದಾರರಲ್ಲಿ ಒಂದು ವಿಭಾಗ ಬೀಡಿ ಎಲೆ, ಹೊಗೆಸೊಪ್ಪನ್ನು ಪಡೆದುಕೊಂಡು ಹೋಗಲು ಯತ್ನಿಸಿದ್ದು, ಇದನ್ನು ತಿಳಿದ ಗುತ್ತಿಗೆದಾರರ ಇನ್ನೊಂದು ತಂಡ ಅಲ್ಲಿಗೆ ಬಂದು ವಿತರಣೆಯನ್ನು ತಡೆದಿದ್ದು, ಬಳಿಕ ಮುಷ್ಕರ ಆರಂಭಿಸಿದರು.