ಜೇನು ಗಡ್ಡಧಾರಿಯಾಗಿ ಪೆರ್ನಾಜೆ ಮಹಿಳೆ

 ವಿಶೇಷ ವರದಿ

ಪುತ್ತೂರು : ಜೇನು ಎಂದಾಕ್ಷಣ ಬಾಯಲ್ಲಿ ನೀರೂರುವುದು ಸಹಜ. ಕಲಿಯುಗದ ಅಮೃತವೆಂದೇ ಜೇನನ್ನು ಕರೆಯುತ್ತಾರೆ. ಇದೀಗ ಪೆರ್ನಾಜೆಯ ಸೌಮ್ಯಾ ಎಂಬವರು ಜೇನು ಕೃಷಿಯತ್ತ ಮುನ್ನುಗಿರುವುದಷ್ಟೇ ಅಲ್ಲದೆ ಜೇನು ಗಡ್ಡಧಾರಿಯಾಗುವುದು ಅನೇಕರಲ್ಲಿ ಅಚ್ಚರಿ ಸಹಿತ ಕುತೂಹಲ ಮೂಡಿಸಿದೆ.

ಮಹಿಳೆಯರು ಹಲ್ಲಿ, ಜಿರಲೆಯನ್ನು ಕಂಡು ಬೆಚ್ಚಿ ಬೀಳುವಾಗ ಇವರು ಗಡ್ಡದಲ್ಲಿ ಜೇನು ರಾಶಿಯನ್ನು ಕೂರಿಸಿಕೊಂಡು ಸೈ ಎನಿಸಿಕೊಂಡ ಸೌಮ್ಯಾ ಪೆರ್ನಾಜೆ ಇವರು ಪಟಿಕ್ಕಲ್ಲು ರಾಮಚಂದ್ರ ಭಟ್ ಮತ್ತು ದೇವಕಿ ದಂಪತಿಯ ಪುತ್ರಿ ತನ್ನ ಪತಿಯ ಜೊತೆ ಜೇನಿನ ಪರಿಣತೆ ಪಡೆದು ಮುಖದ ಮೇಲೆಲ್ಲಾ ಬಿಟ್ಟುಕೊಂಡರು ಜೇನುನೊಣ ಕಚ್ಚುವುದಿಲ್ಲ. ರಾಣಿ ನೊಣ ಬಿಟ್ಟಾಗಲೇ ಗಡ್ಡ ಪೂರ್ತಿ ಮುತ್ತಿಕ್ಕಿ ಸುಂದರ ಗಡ್ಡ ನಿರ್ಮಾಣವಾಗುತ್ತದೆ. ಮಹಿಳೆಯರು ಮನಸು ಮಾಡಿದರೆ ಏನನ್ನು ಸಾಧಿಸಬಹುದು. ಕಲೆಗೆ ಒಂದು ವಿಶಿಷ್ಟವಾದ ಸ್ಥಾನವಿದೆ,ಅದನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಇದನ್ನು ನೋಡಿಯಾದರೂ ಜೇನು ನೊಣಗಳು ಏನು ಮಾಡುವುದಿಲ್ಲ, ಅವು ಸಾಧು ಸ್ವಭಾವದವು ಎಂದು ನಿರೂಪಿಸುವುದೆ ಇವರ ಉದ್ದೇಶ. “ಜೇನಿಗೋಸ್ಕರ ಜೇನು ಗೂಡಿಗೆ ಬೆಂಕಿ ಹಾಕಿ ನಾಶ ಮಾಡಬೇಡಿ” ಎಂದು ತಿಳಿಸುವ ಸೌಮ್ಯಾ ಪೆರ್ನಾಜೆ, “ಕೃಷಿಯಲ್ಲಿ ಜೇನು ನೊಣಗಳಿಂದ ಪರಕೀಯ ಪರಾಗಸ್ಪರ್ಶದಿಂದ ಅಧಿಕ ಫಲೋತ್ಪತ್ತಿಗಳನ್ನು ಪಡೆಯಬಹುದು” ಎನ್ನುತ್ತಾರೆ.ಸಾಧಕ ಸ್ತ್ರೀಯರಲ್ಲಿ ಸೌಮ್ಯಾ ಕೂಡ ಒಬ್ಬರು. ಇವರು ಜೇನು ಗಡ್ಡದಲ್ಲಿ ಇಟ್ಟ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯು ಅವರಿಗಿದೆ.