ತೆಲುಗು, ಮರಾಠಿಗೆ `ಬ್ಯೂಟಿಫುಲ್ ಮನಸುಗಳು’

ತೆಲುಗು, ಮರಾಠಿಗೆ `ಬ್ಯೂಟಿಫುಲ್ ಮನಸುಗಳು’

ಕನ್ನಡದವರು ಉಳಿದ ಚಿತ್ರಗಳನ್ನು ರಿಮೇಕ್ ಮಾಡಿ ನಮ್ಮ ಭಾಷೆಯ ಚಿತ್ರಪ್ರೇಮಿಗಳಿಗೆ ದರ್ಶಿಸುವುದು ಕಾಮನ್. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಕೆಲವು ಚಿತ್ರಗಳೂ ಪರಭಾಷೆಯ ಗಮನಸೆಳೆಯುತ್ತಿವೆ. ಇದೀಗ ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ `ಬ್ಯೂಟಿಫುಲ್ ಮನಸುಗಳು’ ತೆಲುಗು ಮತ್ತು ಮರಾಠಿಗೆ ರೀಮೇಕ್ ಆಗುತ್ತಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಜಯತೀರ್ಥ ಸಂತಸದಿಂದ ಸುದ್ದಿಗಾರರಿಗೆ ತಿಳಿಸಿದ್ದಾರೆ.

2012ರಲ್ಲಿ ಬ್ಯೂಟಿಪಾರ್ಲರ್ ಒಂದರಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದು ತೆರೆಗೆ ತಂದಿರುವ ಈ ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದು ಬಾಕ್ಸ್ ಆಫೀಸಿನಲ್ಲಿ ತಕ್ಕಮಟ್ಟಿಗೆ ಯಶಸ್ಸು ಪಡೆದಿದೆ.