ವ್ಯಕ್ತಿಗೆ ಕರಡಿ ದಾಳಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಂಡಗೋಡ : ತಾಲೂಕಿನ ಕಾತೂರ ಗ್ರಾ ಪಂ ವ್ಯಾಪ್ತಿಯ ಮರಗಡಿ ಗ್ರಾಮದ ಕಾಡಿನಲ್ಲಿ ಬುಧವಾರ ಸಂಜೆ ದನ ಕಾಯವವನ ಮೇಲೆ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿದೆ.

ಮರಗಡಿ ಗೌಳಿದಡ್ಡ್ಡಿ ನಿವಾಸಿ ನಿನ್ನು ಬಾಬು ಪೊರಡೆ ಎಂಬಾತನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಈತ ಪ್ರತಿದಿನದಂತೆ ಬುಧವಾರವೂ ದನಕಾಯಲು ಕಾಡಿಗೆ ಹೋಗಿದ್ದು, ಸಂಜೆ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ.

ಅದೃಷ್ಟವಶಾತ್ ಅದರಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಆತನ ಕೈ, ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಗೆ ಉಪವಲಯ ಅರಣ್ಯಧಿಕಾರಿ ಮಹೇಶ ಕೆ ಭೇಟಿ ನೀಡಿ ಆತನ ಯೋಗಕ್ಷೇಮ ವಿಚಾರಿಸಿದ್ದಾರೆ.