ಇನ್ನಂಜೆ ವಿದ್ಯಾರ್ಥಿಗಳಿಂದ ಬೀಚ್ ಕ್ಲೀನ್

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಎರ್ಮಾಳು ರಾಜೀವಗಾಂಧಿ ಸಭಾಂಗಣದಲ್ಲಿ ಆಯೋಜಿಸಲಾದ ಪದವಿಪೂರ್ವ ಶಿಕ್ಷಣ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ, ಇನ್ನಂಜೆ ಎಸ್ ವಿ ಎಚ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಬೀಚ್ ಕ್ಲೀನ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆಗೆ ಸಾಥ್ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಯೋಜನಾಧಿಕಾರಿ ರಾಘವೇಂದ್ರ ಪುರಾಣಿಕ್, ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮ ಹಾಗೂ ಅದನ್ನು ಹೇಗೆ ನಿವಾರಿಸಬಹುದು ಎಂಬ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ಈ ದಿನ ತೀರ ಹದಗೆಟ್ಟ ಮೀನುಗಾರಿಕಾ ರಸ್ತೆಯನ್ನು ತೆಂಕ ಗ್ರಾ ಪಂ ಸಹಯೋಗದೊಂದಿಗೆ ದುರಸ್ತಿ ನಡೆಸಿ ಇದೀಗ ಕೇಂದ್ರದ ಸ್ವಚ್ಛ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಶಿಬಿರದ ವಿದ್ಯಾರ್ಥಿಗಳು ತೆಂಕ ಎರ್ಮಾಳು ಕಡಲತೀರವನ್ನು ಸ್ವಚ್ಛಗೊಳಿಸಲು ಸಾಥ್ ನೀಡಿದ್ದಾರೆ” ಎಂದರು.