ಪಂಚಾಯತ್ ಸಿಬ್ಬಂದಿ ಬಳಸಿಕೊಂಡು ಡುಪ್ಲಿಕೇಟ್ ಡೋರ್ ನಂಬ್ರ ಪಡೆಯುವವರ ಬಗ್ಗೆ ಎಚ್ಚರವಿರಲಿ

ಕುತ್ತೆತ್ತೂರು ಮತ್ತು ಪೆರ್ಮುದೆ ಗ್ರಾಮಗಳಲ್ಲಿ ಹಲವಾರು ಮಂದಿ ನಿರಾಶ್ರಿತರು  ಪಂಚಾಯತ್ ಸಿಬ್ಬಂದಿಯನ್ನು ಬಳಸಿಕೊಂಡು ಡುಪ್ಲಿಕೇಟ್ ಡೋರ್ ನಂಬ್ರಗಳನ್ನು ಮಾಡಿಕೊಂಡಿರುತ್ತಾರೆ. ಸೂರಿಂಜೆ, ಕುತ್ತೆತ್ತೂರು ಮತ್ತು ಪೆರ್ಮುದೆ ಗ್ರಾಮಸ್ಥರು, ಪ್ರತಿ ಡೋರ್ ನಂಬ್ರಕ್ಕೆ  ರೂ 50 ಸಾವಿರದಿಂದ ಒಂದು ಲಕ್ಷಕ್ಕೆ ಪಂಚಾಯತ್ ಸಿಬ್ಬಂದಿಗೆ ಲಂಚ ನೀಡಿ ಅಕ್ರಮವಾಗಿ ಡೋರ್ ನಂಬ್ರಪಡೆದುಕೊಂಡಿರುತ್ತಾರೆ. ಪಂಚಾಯತ್ ಸಿಬ್ಬಂದಿ ಡೋರ್ ನಂಬ್ರ ನೀಡುವಾಗ ಜಾಗಕ್ಕೆ ನೋಟಿಫಿಕೇಶನ್ ಆದ  ಹಿಂದಿನ ತಾರೀಕಿಗೆ ಹೊಂದಿಕೊಳ್ಳುವ ಹಾಗೆ ಅಡ್ಜೆಸ್ಟಮೆಂಟ್ ಮಾಡಿ, ನೈಜ ಡೋರ್ ನಂಬರಿನ ಹಾಗೆ ಬಿಂಬಿಸಲು ಹೊರಟಿದ್ದಾರೆ. ಕೆಲವರು 2-5 ಸೆಂಟ್ಸ್ ಜಾಗದಲ್ಲಿ ಐದಾರು ಡೋರ್ ನಂಬ್ರಗಳನ್ನು ಅಕ್ಕ, ಅಣ್ಣ, ಹೆಂಡತಿ ಮುಂತಾದವರ ಹೆಸರಲ್ಲಿ ಪಡೆದುಕೊಂಡಿರುತ್ತಾರೆ. ಈ ದಂಧೆ ಹಲವಾರು ವರ್ಷದಿಂದ ನಡೆಯುತ್ತಿದ್ದು, ಕಳೆದೆರಡು ವರ್ಷದಿಂದ ಈ ಪಿಡುಗು ಜೋರಾಗಿ ಆವರಿಸಿದೆ. ಇದು ಎಲ್ಲರ ಮನೆ ಮಾತಾಗಿದೆ. ಆದ್ದರಿಂದ ಈ ಅಕ್ರಮಗಳನ್ನು ಸಕ್ರಮಗೊಳಿಸಿ ಒಂದು ಮನೆಗೆ ಒಂದೇ ಡೋರ್ ನಂಬ್ರ ನೀಡಿ ಪಂಚಾಯತ್ ಸಿಬ್ಬಂದಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗಿದೆ.

  • ಗ್ರಾಮಸ್ಥರು, ಪೆರ್ಮುದೆ, ಕುತ್ತೆತ್ತೂರು