ಪಡುಬಿದ್ರೆ ಅಪಾಯಕಾರಿ ತಿರುವು ಬಗ್ಗೆ ಜೋಕೆ

ಅಪಘಾತ ವಲಯ ಎಂದೇ ಹೆಸರು ಪಡೆದಿರುವ ಪಡುಬಿದ್ರೆಯಲ್ಲಿ ಹಲವು ದುರಂತಗಳು ನಡೆದು ಹಲವು ಮಂದಿ ಪ್ರಾಣಕಳಕೊಂಡರೂ ಇದಕ್ಕೊಂದು ಪರಿಹಾರ ವ್ಯವಸ್ಥೆ ಇನ್ನೂ ಕೂಡಾ ಆಗಿಲ್ಲ
ಇಲ್ಲೊಂದು ಅಪಾಯಕಾರಿ ತಿರುವು ಇದೆ  ತಿರುವು ಇದ್ದರೂ ಯಮಲೋಕದಿಂದ ಬರುವ ವೇಗದೂತ ಬಸ್ಸುಗಳಿಗೆ ಬ್ರೇಕ್ ಎಂಬುದೇ ಇಲ್ಲವೇ ಎಂದು ಗೋಚರಿಸುತ್ತಿದೆ  ವೇಗದೂತ ಬಸ್ಸುಗಳ ಚಾಲಕರ ನಿಯಂತ್ರಣ ತಪ್ಪಿ ಇಲ್ಲಿ ಅಪಘಾತಗಳು ಸಂಭವಿಸುತ್ತವೆ  ಆದರೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಸಂಬಂಧಪಟ್ಟ ಇಲಾಖೆ ಇನ್ನೂ ಮಾಡಿಲ್ಲ  ಇಲ್ಲಿನ ರಸ್ತೆಗಳನ್ನು ಕೂಡಲೇ ವಿಭಜಿಸಿ ಸೂಚನಾ ಫಲಕ ಹಾಕಬೇಕಿದೆ

  • ಟಿ ನಿರಂಜನ್  ಪಡುಬಿದ್ರೆ