ಬಿ ಸಿ ರೋಡ್ ಟೋಲ್ ಗೇಟ್ ಅವ್ಯವಸ್ಥೆ

ಬಂಟ್ವಾಳ ಬಳಿಯ ರಾಷ್ಟ್ರ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಎರಡೂ ಬದಿಯಲ್ಲಿ ಕಸಕಡ್ಡಿ ಪ್ಲಾಸ್ಟಿಕ್ ಕುರುಚಲು ಗಿಡಗಳು ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಇಲ್ಲಿ ಕರ್ತವ್ಯ ನಿರ್ವಹಿಸುವವರು ಸಮವಸ್ತ್ರ ಇಲ್ಲದೇ ಶಿಸ್ತು ಪಾಲಿಸುತ್ತಿಲ್ಲ ರಾತ್ರಿ ವೇಳೆ ಬೆಳಕಿನ ಕೊರತೆ ಎದ್ದು ಕಾಣುತ್ತದೆ ಟೋಲ್ ಗೇಟ್ ಬಳಿ ಎಡ ಬಲ ರಸ್ತೆಗಳಲ್ಲಿ ಉತ್ತಮ ಬೆಳಕು ನೀಡುವ ವಿದ್ಯುತ್ ದೀಪ ಅಳವಡಿಸಬೇಕು ನಿರ್ವಹಣೆ ತೀರಾ ಕಳಪೆಯಾಗಿರುವುದನ್ನು ಲೋಕಸಭಾ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಬೇಕು ಅಧಿಕಾರಿಗಳನ್ನು ಕರೆದು ನಿರ್ದಿಷ್ಟ ನಿಯಮ ಪಾಲನೆಗೆ ನಿರ್ದೇಶಿಸಬೇಕು ಸಾವಿರಾರು ವಾಹನ ಸಂಚರಿಸುವ ಈ ರಸ್ತೆಯ ಟೋಲ್ ಗೇಟ್ ಕೇವಲ ಕಲೆಕ್ಷನ್ ಗೇಟ್ ಆಗಬಾರದು ಸ್ವಚ್ಛತೆ ಶಿಸ್ತು ಕಾಪಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಸಿಬ್ಬಂದಿ ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಆದೇಶ ನೀಡಬೇಕು ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚು ಬೆಳಕು ನೀಡುವ ವಿದ್ಯುತ್ ಬಲ್ಬುಗಳನ್ನು ಅಳವಡಿಸುವುದು ತುರ್ತು ಅಗತ್ಯವಿದೆ ಆರ್ಟಿಓ ಮತ್ತು ಜಿಲ್ಲಾಧಿಕಾರಿಯವರು ಆಡಚಣೆ ಲೋಪದೋಷಗಳನ್ನು ಸರಿಪಡಿಸಬೇಕು

  • ರಾಮಚಂದ್ರ ಟಿ ಬಿ ಸಿ ರೋಡ್