ಬಿ ಸಿ ರೋಡ್ ಸರ್ವೀಸ್ ರಸ್ತೆ ಪೂರಾ ಕೆಸರುಮಯ

ಎರಡು ದಿನದ ಹಿಂದೆ ಸುರಿದ ಮಳೆಗೆ ಬಿ ಸಿ ರೋಡು ಸರ್ವೀಸ್ ರಸ್ತೆ ಸಂಪೂರ್ಣ ಕೆಸರುಮಯವಾಗಿ ಪಾದಚಾರಿಗಳು ಇನ್ನಿಲ್ಲದ ಸಂಕಟ ಎದುರಿಸಿದ್ದಾರೆ.
ಬಂಟ್ಬಾಳ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಕೇಬಲ್ ಅಳವಡಿಕೆಗೆ ಸರ್ವೀಸ್ ರಸ್ತೆಯನ್ನು ಅಗೆದು ಹಾಕಲಾಗಿದೆ. ಅಗೆದ ಮಣ್ಣನ್ನು ಮತ್ತೆ ಹೊಂಡಕ್ಕೆ ಹಾಕಲಾಗಿದ್ದರೂ ರಸ್ತೆಗಿಂತ ಎತ್ತರದಲ್ಲಿ ಮಣ್ಣಿನ ರಾಶಿ ಹಾಕಿದ್ದರಿಂದ ಸುರಿದ ಭಾರೀ ಮಳೆಗೆ ಮಣ್ಣು ಪೂರಾ ಕರಗಿ ಸರ್ವೀಸ್ ರಸ್ತೆ ಪೂರಾ ಕೆಸರುಮಯವಾಯಿತು.
ಕೆಸರು ನೀರಿನಿಂದ ಜನ ಅತ್ತಿತ್ತ ದಾಟಲು ಪರದಾಟಪಟ್ಟರೆ ವಾಹನಗಳು ಜನಸಾಮಾನ್ಯರ ಮೇಲೆ ಕೆಸರು ನೀರು ಚಿಮುಕಿಸಿಕೊಂಡು ಸಾಗಿದವು. ವಾಹನದ ಚಕ್ರದಿಂದ ಕೆಸರು ಒಂದೆಡೆಯಿಂದ ಇನ್ನೊಂದಡೆಗೆ ಹರಡಿಕೊಂಡಿದ್ದರಿಂದ ಬಿ ಸಿ ರೋಡ್ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿತ್ತು.
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್‍ಲೈನ್ ಅಳವಡಿಕೆಗಾಗಿ ಹಾಗೂ ದೂರವಾಣಿ ಸಂಪರ್ಕದ ಕೇಬಲ್ ಅಳವಡಿಕೆಗಾಗಿ ಬಿ ಸಿ ರೋಡಿನ ಸರ್ವೀಸ್ ರಸ್ತೆ ಹಾಗೂ ಹೆದ್ದಾರಿ ಬದಿ ಅಗೆಯಲಾಗಿತ್ತು. ಮಳೆಗಾಲ ಶುರುವಾಗಲು ಎರಡು ತಿಂಗಳಿದ್ದರೂ ಮೊದಲ ಮಳೆಗೇನೇ ಈ ರೀತಿಯಾದರೆ ಮಳೆಗಾಲದಲ್ಲಿ ಬಿ ಸಿ ರೋಡಿನ ಹೇಗಿದ್ದೀತು

  • ಚಂದನ್ ಕೋಟ್ಯಾನ್  ಬಿ ಸಿ ರೋಡು