ನಾಳೆ ಬಪ್ಪನಾಡು ಧ್ವಜ

ಮುಲ್ಕಿ : ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವರ್ಷಾವಧಿ ಜಾತ್ರೆ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ನಾಳೆ ಧ್ವಜಾರೋಹಣಗೊಳ್ಳಲಿದೆ. ದೇವಿ ಮತ್ತು ಸಸಿಹಿತ್ಲು ಭಗವತಿಯವರ ಭೇಟಿ, ರಾತ್ರಿ ಉತ್ಸವ ಬಲಿ, ಎಪ್ರಿಲ್ 16ರಂದು ಹಗಲು ರಥಾರೋಹಣ, ರಾತ್ರಿ ಉತ್ಸವಬಲಿ, ಶಯನೋತ್ಸವ, ಎಪ್ರಿಲ್ 17ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಸಂಜೆ 7ಕ್ಕೆ ಬಲಿ, ಓಕುಳಿ, ಶ್ರೀ ದೇವಿ, ಸಸಿಹಿತ್ಲು ಭಗವತಿಯವರ ಭೇಟಿ, ಮಹಾರಥೋತ್ಸವ, ಅವಭೃತ, ಧ್ವಜಾವರೋಹಣ ನಡೆಯಲಿದೆ ಎಂದು ಬಪ್ಪನಾಡು ದೇವಳ ಅನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು ತಿಳಿಸಿದ್ದಾರೆ.