ಭಾರೀ ಪ್ರಮಾಣದ ನಿಷೇಧಿತ ತಂಬಾಕು ವಶಕ್ಕೆ, ಒಬ್ಬ ಸೆರೆ

ವಶಪಡಿಸಲಾದ ತಂಬಾಕು ಉತ್ಪನ್ನ ಜತೆ ಆರೋಪಿ ಸಹಿತ ಪೆÇಲೀಸರು

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ದಿನಸಿ ಸಾಮಗ್ರಿ ಸಾಗಾಟದ ಜೊತೆ ಸಾಗಿಸಲಾಗುತಿದ್ದ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಬದಿಯಡ್ಕ ಪೆÇಲೀಸರು ವಶಪಡಿಸಿಕೊಂಡಿದ್ದಾರೆ
ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ
ದಿನಸಿ ಸಾಮಗ್ರಿಗಳು ಹೇರಿದ ವಾಹನದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳು ಸಾಗಾಟವಾಗುತ್ತಿದೆಯೆಂಬ ರಹಸ್ಯ ಮಾಹಿತಿ ಆಧಾರದಲ್ಲಿ ಬದಿಯಡ್ಕ ಪೆÇಲೀಸರ ಕಾರ್ಯಾಚರಣೆ ನಡೆದಿದೆ
ಈ ಸಂಬಂಧ ಇಕೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ ವಾಹನದಲ್ಲಿದ್ದ ವಿವಿಧ ರೀತಿಯ 2700 ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜತೆ ನೀರುಳ್ಳಿ  ಬಿಸ್ಕತ್ತು  ಅಕ್ಕಿ ಪ್ಯಾಕೆಟುಗಳು ಪತ್ತೆಯಾಗಿರುವುದಾಗಿ ಹೇಳಲಾಗಿದೆ
ಕಳೆದ ಒಂದು ವಾರದ ಮಧ್ಯೆ ಪೆÇಲೀಸರು ನಡೆಸಿದ ಎರಡನೇ ಬೃಹತ್ ಕಾರ್ಯಾಚರಣೆ ಇದಾಗಿದೆ  ಬದಿಯಡ್ಕ ಪೇಟೆ ವ್ಯಾಪಾರಿ ಮನೆಯಿಂದ 14 ಸಾವಿರ ವಿವಿಧ ರೀತಿಯ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿತ್ತು