ತಂತಮ್ಮ ಭದ್ರತೆ ಹೊಣೆ ಆಯಾ ಬ್ಯಾಂಕುಗಳದ್ದು : ಎಸ್ಪಿ ಸುಧೀರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಬ್ಯಾಂಕಿನ ನಗದು ಹಣ ಸೇರಿದಂತೆ ಯಾವುದೇ ಭದ್ರತೆಯನ್ನು ತೆಗೆದುಕೊಳ್ಳಲು ತಮ್ಮದೇ ಸಿಬ್ಬಂದಿಯನ್ನು, ಸೆಕ್ಯೂರಿಟಿಯನ್ನು ನೇಮಕ ಮಾಡಿಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕುಗಳಿಗೂ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಬ್ಯಾಂಕುಗಳೇ ಸಶಸ್ತ್ರ ಸಿಬ್ಬಂದಿಯನ್ನು ನೇಮಕ ಮಾಡಬೇಕು. ದೊಡ್ಡ ಮೊತ್ತದ ಹಣ ಸಾಗಾಟ ಮಾಡಬೇಕಾದಾಗ ಮೂರು ದಿನಗಳ ಮುಂಚೆ ಮಾಹಿತಿ ನೀಡಿದರೆ ಪೆÇಲೀಸ್ ಭದ್ರತೆ ಒದಗಿಸಲು ಯತ್ನಿಲಾಗುವುದು” ಎಂದು ದ.ಕ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಮಂಗಳೂರು ನಗರ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಜರುಗಿದ ಜಿಲ್ಲಾ ಬ್ಯಾಂಕಿಂಗ್ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಬ್ಯಾಂಕ್ ಸಾಲವನ್ನುವಸೂಲು ಮಾಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಪೊಲೀಸ್ ಭದ್ರತೆ ನೀಡಬಹುದು. ಆದರೆ ಸಾಲ ವಸೂಲಿ ಮಾಡುವ ಕೆಲಸ ಮಾಡುವುದಿಲ್ಲ. ಬ್ಯಾಂಕ್ ಸಿಬ್ಬಂದಿಗೆ ಅಪಾಯವಿದೆ ಎಂದರೆ ಸೂಕ್ತ ಭದ್ರತೆ ಕೈಗೊಳ್ಳುತ್ತೇವೆ. ಆದರೆ ಆಯಾ ಬ್ಯಾಂಕಿನ ಹಿರಿಯ ಅಧಿಕಾರಿಗಳು ಮುಂಚಿತವಾಗಿ ಈ ಬಗ್ಗೆ ನಮಗೆ ತಿಳಿಸಿರಬೇಕು” ಎಂದರು.

“ಬ್ಯಾಂಕಿನೊಳಗೆ ಆಗುವ ಯಾವುದೇ ವಂಚನೆ ಪ್ರಕರಣ ನಡೆದ ತಕ್ಷಣ ಪೆÇಲೀಸ್ ಠಾಣೆಯಲ್ಲಿ ಎಫೈಆರ್ ದಾಖಲಿಸಿರಿ, ವಂಚನೆ ಪ್ರಕರಣಗಳನ್ನು ಸಾಬೀತು ಮಾಡುವ ಸೂಕ್ತ ದಾಖಲೆಗಳನ್ನು ನೀಡಿರಿ, ಇಲ್ಲದೇ ಹೋದಲ್ಲಿ ಆರೋಪಿಗಳನ್ನು ಬಂಧಿಸುವುದು ಕಷ್ಟ ಸಾಧ್ಯ. ಕೇವಲ ಇಬ್ಬರ ಆರೋಪ ಸಾಬೀತುಪಡಿಸುವ ದಾಖಲೆ ಸಿಕ್ಕಿದರೂ ಬಳಿಕ ನಾವು ಇಡೀ ಪ್ರಕರಣವನ್ನು ಬೇಧಿಸುತ್ತೇವೆ” ಎಂದರು.

“ಈ ಹಿಂದೆ ಅನೇಕ ಬಾರಿ ಎಲ್ಲಾ ಬ್ಯಾಂಕುಗಳೂ ತಮ್ಮ ಬ್ಯಾಂಕಿನ ಹೊರಭಾಗ ಮತ್ತು ಒಳಭಾಗದಲ್ಲಿ ಸೀಸಿಟೀವಿಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೂ ಕೂಡಾ ಅನೇಕ ಬ್ಯಾಂಕುಗಳು ಸಮರ್ಪಕವಾಗಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಕೂಡಲೇ ಅದನ್ನು ಅಳವಡಿಸಿ. ಕಚೇರಿ ಒಳಗಡೆ ಮೂವ್ಮೆಂಟ್ ಸೆನ್ಸಾರುಗಳನ್ನೂ ಅಳವಡಿಸಬೇಕು. ಎಟಿಎಂ ಕೇಂದ್ರಗಳಲ್ಲಿ ಸೀಸಿ ಕ್ಯಾಮರಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ 15 ದಿನಗಳ ಸೀಸಿಟೀವಿ ವೀಡಿಯೊ ದಾಖಲೆಗಳನ್ನು ಸಂಗ್ರಹಿಸಿಟ್ಟಿರಬೇಕು. ಹೀಗೆ ಮಾಡುವುದರಿಂದ ಅಪರಾಧ ಕೃತ್ಯ ನಡೆದಾಗ ತನಿಖೆಗೆ ಸುಲಭವಾಗುತ್ತದೆ. ಆರೋಪಿಗಳ ಬಂಧನವನ್ನು ತ್ವರಿತವಾಗಿ ಮಾಡಬಹುದಾಗಿದೆ” ಎಂದರು.