ಮಧ್ಯಮ ವರ್ಗದವರಿಗೆ ಉರುಳಾದ ಬ್ಯಾಂಕುಗಳು

ನೋಟ್ ಬ್ಯಾನ್ ಮಾಡಿದ ನಂತರ ಬ್ಯಾಂಕುಗಳು ಅಸ್ತಿತ್ವದ ಸಮಸ್ಯೆ ಎದುರಿಸುತ್ತಿವೆ. ಜನಸಾಮಾನ್ಯರ  ಮಧ್ಯಮ ವರ್ಗದವರ ಪಾಡು ಹೇಳ ತೀರದು. ಈಗ ಬ್ಯಾಂಕಿನ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಖಡ್ಡಾಯ ಇಲ್ಲದಿದ್ರೆ ಖಾತೆ ಬಂದ್  ಇಲ್ಲದಿದ್ರೆ ಇದ್ದ ಹಣದಲ್ಲಿ ದಂಡ ಮೊತ್ತ ಮುರಿದುಕೊಳ್ಳುತ್ತಾರಂತೆ. ಎಂತಹ ವಿಚಿತ್ರವಿದು. ಇದೇ  ಮೋದಿ  ಸರಕಾರದು ಅಚ್ಛೇ ದಿನಗಳಾ  ಇದರಲ್ಲಿ ಪಂಗನಾಮ ಹಾಕಿಸಿಕೊಳ್ಳುವವರು ಮಧ್ಯಮ ವರ್ಗದವರು ಮಾತ್ರ. ಕಾರಣ ಬಡವರಿಗೆ ಇರುವ `ಜನಧನ’ ಯೋಜನೆ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೂ ಇದಕ್ಕೆ ಯಾವುದೇ ಕಡಿತವಿಲ್ಲವಂತೆ  ಇದು ಯಾವ ನ್ಯಾಯ  ವಿರೋಧ ಪಕ್ಷದವ್ರೇ ಏನು ಮಾಡುತ್ತಿದ್ದಿರಿ ನೀವು

  • ಬಿ ಆರ್ ಕೆ  ಪುತ್ತೂರು