ಬ್ಯಾಂಕಲ್ಲಿ ನಕಲಿ ಚಿನ್ನ ಅಡ, 20 ಲಕ್ಷ ರೂ ಪಂಗನಾಮ

ಸಾಂದರ್ಭಿಕ ಚಿತ್ರ

ಮಡಿಕೇರಿ : ಒಂದು ತಿಂಗಳ ಹಿಂದೆ ಕೇರಳ ಮೂಲದ ಮಹಿಳೆಯೊಬ್ಬಳು ಪೊಲಿಬೆಟ್ಟದ ಸಹಕಾರಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ 20 ಲಕ್ಷ ರೂ ಪಂಗನಾಮ ಹಾಕಿದ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆ ವಿರುದ್ಧ ಬ್ಯಾಂಕ್ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಪೊಲಿಬೆಟ್ಟಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತವು ತನ್ನ ಸದಸ್ಯರಿಗೆ ಚಿನ್ನದ ಮೇಲಿನ ಅಡವಿಗೆ ಸಾಲ ನೀಡುತ್ತಿದೆ. ಇತ್ತೀಚೆಗೆ ನಿವೃತ್ತಿ ಹೊಂದಿದ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣರ ಬೆಂಬಲದಿಂದ ಕೇರಳ ಮಹಿಳೆ ನಕಲಿ ಚಿನ್ನ ಅಡವಿಟ್ಟು, 20 ಲಕ್ಷ ರೂ ಪಡೆದುಕೊಂಡಿದ್ದಾಳೆಂದು ಆರೋಪಿಸಲಾಗಿದೆ.

ಬ್ಯಾಂಕಿಗೆ ಸಂಬಂಧಿಸಿದ ಚಿನ್ನ ಪರೀಕ್ಷೆ ತಜ್ಞ ವೆಂಕಟೇಶ್ ಕೇರಳ ಮಹಿಳೆಯ ಚಿನ್ನ ಅಸಲಿ ಎಂದು ಹೇಳಿದ ಮೇಲೆಯೇ ಆಕೆಗೆ ಹಣ ನೀಡಲಾಗಿತ್ತು. ತನಿಖೆ ವೇಳೆ ಇದು ನಕಲಿ ಎಂದು ಗೊತ್ತಾಗಿದ್ದು, ಸೊಸೈಟಿ ಆಡಳಿತವು ಲಾಯಿಲಾ ಕೃಷ್ಣ ಮತ್ತು ವೆಂಕಟೇಶಗೆ ನೊಟೀಸು ಜಾರಿ ಮಾಡಿದ್ದಾರೆ.