ಬ್ಯಾಂಕ್ ಹಣ ಸಾಗಾಟ ವಾಹನ ಟ್ಯಾಂಕರಿಗೆ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲ ಸಮೀಪ ಅಡುಗೆ ಅನಿಲ ತುಂಬಿಕೊಂಡು ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಟ್ಯಾಂಕರಿಗೆ ಎದುರಿನಿಂದ ಬರುತ್ತಿದ್ದ ಆ್ಯಕ್ಸಿಕ್ ಬ್ಯಾಂಕಿಗೆ ಸೇರಿದ 407 ವಾಹನ ಡಿಕ್ಕಿ ಹೊಡೆದಿದೆ.

ಹುಬ್ಬಳ್ಳಿಯಿಂದ ಮಂಗಳೂರು ಆ್ಯಕ್ಷಿಸ್ ಬ್ಯಾಂಕಿಗೆ 2 ಕೋಟಿ ರೂ ಹಣವನ್ನು ತುಂಬಿಕೊಂಡು 407 ವಾಹನ ಸಾಗಿತ್ತು. ಆದರೆ ಚಾಲಕನ ಅಜಾಗರೂಕತೆಯಿಂದಾಗಿ ಎದುರಿಗೆ ಬರುತಿದ್ದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದ್ದು, ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಸೇರಿದಂತೆ 5 ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗದೇ ಇರುವುದು ಪೊಲೀಸರಿಗೆ ತುಸು ಸಮಾಧಾನವೆಂಬಂತಾಯಿತು. ತಕ್ಷಣ ಅಂಕೋಲಾ ಪೊಲೀಸರು ಹಾಗೂ ಹೆದ್ದಾರಿ ಗಸ್ತು ವಾಹನ ಸ್ಥಳಕ್ಕೆ ತೆರಳಿ ಆ್ಯಕ್ಷಿಸ್ ಬ್ಯಾಂಕಿಗೆ ಸೇರಿದ ವಾಹನಕ್ಕೆ ಭದ್ರತೆ ನೀಡಿ ವಾಹನ ಸಂಚಾರ ಸುಗಮಗೊಳಿಸಿದರು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.