ಭಜನಾ ಗಾಯಕ ಸತ್ಯನಾರಾಯಣ ನಾಯ್ಕ ನಿಧನ

ಹೊನ್ನಾವರ : ಅತ್ಯುತ್ತಮ ಭಜನಾ ಗಾಯಕ ಎಂದೇ ಪ್ರಸಿದ್ಧರಾಗಿರುವ ತಾಲೂಕಿನ ಗುಂಡಿಬೈಲದ ಸತ್ಯನಾರಾಯಣ ನಾಯ್ಕ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.

ತಮ್ಮ ಮಧುರ ಕಂಠದಿಂದ ಭಾವಪೂರ್ಣವಾಗಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಸತ್ಯನಾರಾಯಣ ನಾಯ್ಕ, ರಾಜ್ಯ ಹಾಗೂ ಹೊರರಾಜ್ಯಗಳಲ್ಲೂ ಹಲವಾರು ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಿದ್ಧರಾಗಿದ್ದರು.