ಮರಗೆಣಸು ಕೃಷಿ ಮಾಡಿದ ಬಂದಡ್ಕ ಶಾಲಾ ಮಕ್ಕಳು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಂದಡ್ಕ ಹೈಯರ್ ಸೆಕೆಂಡರಿ ಶಾಲೆಯ ಸೀಡ್ ಮಕ್ಕಳೊಂದಿಗೆ ಉದ್ಯೋಗ ಖಾತರಿ ಕಾರ್ಮಿಕರೂ ಸೇರಿಕೊಂಡು ಒಂದೂವರೆ ಎಕರೆ ಬಂಜರು ಭೂಮಿಯಲ್ಲಿ ಮರಗೆಣಸು ಕೃಷಿ ಮಾಡಿದರು.

ಕುತ್ತಿಕೋಲ್ ಗ್ರಾಮ ಪಂಚಾಯಿತಿಯ ವಿಲ್ಲಾರಂಬಯಲು ಪ್ರದೇಶದಲ್ಲಿ ಉದ್ಯೋಗ ಖಾತರಿ ಕಾರ್ಮಿಕರು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಮರಗೆಣಸು ಕೃಷಿ ಮಾಡಲು ಚಾಲನೆ ನೀಡಲಾಯಿತು. ಇದಕ್ಕಾಗಿ 1200ರಷ್ಟು ಗಡ್ಡೆಗಳನ್ನು ಹಾಕಲಾಯಿತು. ಈ ಸಂದರ್ಭ ಶಿಕ್ಷಕರ ಸಹಿತ ರಕ್ಷಕರು ಉಪಸ್ಥಿತರಿದ್ದರು.