ವಿಶೇಷ ಸರಕಾರಿ ವಕೀಲ ನೇಮಕ

ವಿನಾಯಕ ಬಾಳಿಗಾ ಕೊಲೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಡಿಯಾಲಬೈಲ್ ನಿವಾಸಿ, ಆರ್ ಟಿ ಐ ಕಾರ್ಯಕರ್ತ, ಮಾರ್ಚ್ 21ರಂದು ತಮ್ಮ ಮನೆ ಮುಂಭಾಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ವಾದಿಸಲು ಇದೀಗ ವಿಶೇಷ ಸರಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮಂಗಳೂರಿನ ವಕೀಲರಾಗಿರುವ ರವೀಂದ್ರ ಕಾಮತ್ ಅವರನ್ನು ನೇಮಕ ಮಾಡಲಾಗಿದೆ.

ರವೀಂದ್ರ ಕಾಮತ್ ಅವರ ನೇಮಕ ಸಂಬಂಧವಾಗಿ ಒಳಾಡಳಿತ ಇಲಾಖೆಯ ಪೊಲೀಸ್ ಸೇವೆಗಳ ವಿಭಾಗವು ಬುಧವಾರ ಈ ಆದೇಶವನ್ನು ಹೊರಡಿಸಿದೆ.

ಮೃತ ವಿನಾಯಕ ಬಾಳಿಗಾ ಅವರ ತಂದೆ ರಾಮಚಂಧ್ರ ಬಾಳಿಗಾ ಮನವಿಯಂತೆ ರವೀಂದ್ರ ಕಾಮತ್ ಅವರನ್ನು ಎಸ್ ಪಿ ಪಿ ಹೊಣೆ ನಿರ್ವಹಿಸಲು ನೇಮಕ ಮಾಡಲಾಗಿದೆ. ಈ ಕಾರಣದಿಂದ ಎಸ್ ಪಿ ಪಿ ಅವರ ಸಂಭಾವನೆ ಸೇರಿದಂತೆ ಇತರೆ ವೆಚ್ಚಗಳನ್ನು ರಾಮಚಂದ್ರ ಬಾಳಿಗಾ ಅವರೇ ಭರಿಸಬೇಕು ಎಂದು ತಿಳಿಸಲಾಗಿದೆ.