ಮೇ 23ರಿಂದ ಬಜೆ ಡ್ಯಾಂ ಹೂಳೆತ್ತುವ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಿಂದ ಹೂಳು ಮೇಲಕ್ಕೆತ್ತಲು ಮೇ 23ರಿಂದ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಸ್ವರ್ಣ ನದಿ ತಟ ಮತ್ತು ಬಜೆ ಡ್ಯಾಂಗಳಿಂದ ಹೂಳು ಮೇಲಕ್ಕೆತ್ತಬೇಕೆಂದು ಸ್ಥಳೀಯರು ಬಹಳ ಸಮಯದಿಂದ ಒತ್ತಾಯಿಸುತ್ತ  ಬಂದಿದ್ದರು. ಹೂಳು ಮೇಲಕ್ಕೆತ್ತಿದರೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಉಡುಪಿ ನಗರ ಸಭೆ ಅಭಿಪ್ರಾಯಪಟ್ಟಿದೆ.

“ಬಜೆ ಡ್ಯಾಂನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಡ್ಯಾಂನಲ್ಲಿ ಮತ್ತೆ 15 ದಿನಗಳ ಕಾಲ ನೀರು ಸಂಗ್ರಹಣೆ ಮಾಡಿಟ್ಟುಕೊಳ್ಳುವುದು ನಮ್ಮ ಉದ್ದೇಶ” ಎಂದು ಆಯುಕ್ತ ಡಿ ಮಂಜುನಾಥಯ್ಯ ಹೇಳಿದ್ದಾರೆ.