ಬಜಾಲ್ ಕಾವು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ

ಇತಿಹಾಸ ಪ್ರಸಿದ್ಧ ಕಾವು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬಜಾಲ್  ಜಪ್ಪಿನಮೊಗರು  ಅಳಪೆ  ಕಂಕನಾಡಿ  ಎಕ್ಕೂರು ಪ್ರದೇಶ ಮಾತ್ರವಲ್ಲದೇ ಊರ ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ  ಫೆಬ್ರವರಿ ತಿಂಗಳಲ್ಲಿ ಶಿವರಾತ್ರಿ ಹಾಗೂ ಡಿಸೆಂಬರ್ ತಿಂಗಳಲ್ಲಿ ಚಂಪಾ ಷಷ್ಠಿಯ ವಿಶೇಷ ಪೂಜಾ ಕಾರ್ಯಕ್ರಮಗಳು ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ  ವರ್ಷಪೂರ್ತಿ ಇನ್ನಿತರ ಪೂಜಾ ಕಾರ್ಯಗಳು ಜರಗುತ್ತಿದ್ದು ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಇಲ್ಲಿ ಯಾವುದೇ ಸೂಕ್ತ ವ್ಯವಸ್ಥೆಗಳಿರುವುದಿಲ್ಲ  ದೇವಸ್ಥಾನದ ಒಳಗಿನ ಮತ್ತು ಸುತ್ತಮುತ್ತಲಿನ ಸ್ವಚ್ಛತೆ  ಬರುವ ಭಕ್ತರಿಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆಗಳು ಇಲ್ಲಿ ಇರುವುದಿಲ್ಲ  ನಿರ್ದಿಷ್ಟ ಸಮಯಕ್ಕೆ ಪೂಜೆ ಆಗುವುದಿಲ್ಲ  ಊರ ಭಕ್ತರಿಂದ ನಡೆಯುವ ವಾರದ ಭಜನೆಗೆ ಇಲ್ಲಿನ ಅರ್ಚಕರಿಂದಾಗಲಿ ಅಥವಾ ದೇವಸ್ಥಾನದ ವ್ಯªಸ್ಥಾಪಕರಿಂದಾಗಲಿ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ  ಮಾತ್ರವಲ್ಲದೆ ಈ ಬಗ್ಗೆ ಅವರಿಗೆ ಯಾವುದೇ ಆಸಕ್ತಿ ಇರುವುದಿಲ್ಲ  ಭಕ್ತರು ನೀಡುವ ಯಾವುದೇ ಸಲಹೆ ಸೂಚನೆಗಳನ್ನು ಇಲ್ಲಿ ಕೇಳುವವರಿಲ್ಲ
ಇಲ್ಲಿ ಭಕ್ತರಿಗೆ ಭಜನೆಯ ಸಲಕರಣೆಯ ಕೊರತೆ ಇದ್ದರೂ ಸ್ವಯಂಪ್ರೇರಿತವಾಗಿ ಬಂದು ಭಜನೆ ಮಾಡುತ್ತಿದ್ದು  ಇತ್ತೀಚೆಗೆ ಇಲ್ಲಿ ನಡೆಯುತ್ತಿದ್ದ ಉತ್ಸವದ ಸಂದರ್ಭದಲ್ಲಿ ಇಲ್ಲಿನ ಅರ್ಚಕರು ಭಜನೆ ಮಾಡುತ್ತಿದ್ದ ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ವಿಪರ್ಯಾಸವಾಗಿದೆ  ಇಲ್ಲಿ ಊರವರನ್ನೊಳಗೊಂಡ ಸಮಿತಿಯೊಂದು ಇದ್ದರೂ ಊಟಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಆದುದರಿಂದ ಕೂಡಲೇ ಧಾರ್ಮಿಕ ದತ್ತಿ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಸ್ಥಾನಕ್ಕೆ ಸೂಕ್ತ ಅರ್ಚಕರನ್ನು ಹಾಗೂ ವ್ಯವಸ್ಥಾಪಕರನ್ನು ನೇಮಿಸಬೇಕು ಹಾಗೂ ಊರಿನ ಎಲ್ಲಾ ಸಂಘ ಸಂಸ್ಥೆಗಳ  ಧಾರ್ಮಿಕ ಕ್ಷೇತ್ರಗಳ ಪದಾಧಿಕಾರಿಗಳನ್ನೊಳಗೊಂಡ ಉಸ್ತುವಾರಿ ಸಮಿತಯನ್ನು ರಚಿಸಿ ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡಿ ದೇವಸ್ಥಾನದ ಪೂಜಾ ಕಾರ್ಯಗಳು ಸುಸೂತ್ರವಾಗಿ ನಡೆಯುವಂತಾಗಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

  •  ನಾರಾಯಣ ಬಂಗೇರ ಅಳಪೆ (ಊರ ಹತ್ತು ಸಮಸ್ತರ ಪರವಾಗಿ) ಮಂಗಳೂರು