ಹಸುಗೂಸು ಅಪಹರಣ ಪ್ರಕರಣದ ಬಂಧಿತ ಆರೋಪಿಗಳಿಗೆ ಜಾಮೀನು

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಮಗುವನ್ನು ಅಪಹರಿಸಿ ತಂದು ಬಾಡಿಗೆ ಮನೆಯಲ್ಲಿ ಇರಿಸಿಕೊಳ್ಳಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಿದೆ.

ತಾಯಿ ಮಗುವನ್ನು ಬಿಟ್ಟು ತನ್ನ ತವರಾದ ನೇಪಾಳಕ್ಕೆ ಹೋಗಿದ್ದಾಳೆಂದು ತಿಳಿಸಿ ಕಳೆದ ನವೆಂಬರ್ 28ರಂದು ಮೂವರು ಯುವಕರು ಮಗುವನ್ನು ಉಪ್ಪಿನಂಗಡಿ ಸಮೀಪದ ಪೆರ್ನೆಗೆ ಕರೆ ತಂದು ಬಾಡಿಗೆ ಮನೆಯಲ್ಲಿ ಸಾಕಲೆತ್ನಿಸಿದ್ದರು. ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೆÇಲೀಸರು ಪ್ರಕರಣಕ್ಕೆ ಸಂಬಂಧಿಸಿ ಮಗುವನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.

ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬೆಂಗಳೂರು ಎಚ್ ಬಿ ಆರ್. ಲೇಔಟ್ ಹೆಣ್ಣೂರು ನಿವಾಸಿ ಮುಹಮ್ಮದ್ ಉಜೈಫ್, ಹಿರೇಬಂಡಾಡಿ ಗ್ರಾಮದ ಆನಡ್ಕ ನಿವಾಸಿ ಶಿಹಾಬುದ್ದೀನ್ ಅಹಮದ್, ಹಿರೇಬಂಡಾಡಿ ಅಡೇಕಲ್ ಕೋನಾಡಿ ನಿವಾಸಿ ಮಹಮ್ಮದ್ ಶಬೀರ್ ಇವರುಗಳಿಗೆ ಜಾಮೀನು ನೀಡಬೇಕೆಂದು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.