ಜಾಮೀನು ಪಡೆದ ಲಾಲೂ ಸಹವರ್ತಿಗಳಿಬ್ಬರು ನಾಪತ್ತೆ

ಪಾಟ್ನ : ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್ ಜೆ ಡಿ ಅಧ್ಯಕ್ಷ ಲಾಲೂ ಪ್ರಸಾದಗೆ ಜೈಲಿನಲ್ಲಿ ಅಡುಗೆ ಮಾಡುವ ನೆಪವೊಡ್ಡಿ, ಸುಳ್ಳು ಕೇಸೊಂದರಲ್ಲಿ ಜೈಲು ಸೇರಿದ್ದ ಲಾಲೂ ಸಹವರ್ತಿಗಳಿಬ್ಬರು, ಜಾಮೀನು ಬಿಡುಗಡೆಯಾದ ಬಳಿಕ ನಾಪತ್ತೆಯಾಗಿದ್ದಾರೆ.

ಲಾಲೂ ಪ್ರಸಾದರ ನಂಬಿಗಸ್ಥ ಅಡುಗೆಯವನಾಗಿದ್ದ ಲಕ್ಷ್ಮಣ್ ಮಹಂತೋ ಮತ್ತು ಈತನ ಸಹಾಯಕ ಮದನ್ ಯಾದವ್ ಎಂಬವರು ಡಿಸೆಂಬರ್ 23ರವರೆಗೆ ಬಿಸ್ರಾ ಮುಂಡಾದ ಸೆಂಟ್ರಲ್ ಜೈಲಿನಲ್ಲಿದ್ದರು. ಅವರೀಗ ಮನೆಯಲ್ಲಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇವರಿಬ್ಬರು ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಇವರು ತಮ್ಮ ವಿರುದ್ಧ ಸುಳ್ಳು ಕೇಸಿನಲ್ಲಿ ಎಫೈಆರ್ ದಾಖಲಿಸಿಕೊಳ್ಳುವ ಸಂಚು ಹೂಡಿಯೇ ಲಾಲೂ ಇದ್ದ ಜೈಲು ಸೇರಿದ್ದರು. ಆದರೆ ಈ ಪ್ರಯತ್ನದಲ್ಲಿ ಅವರು ವಿಫಲರಾಗಿದ್ದರು.

ಸದ್ಯ ರಾಂಚಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇವರು ಲಾಲೂ ಪ್ರಸಾದ್ ಯಾದವಗೆ ಜೈಲಿನಲ್ಲಿ ತಮ್ಮ ಕೈಯಡುಗೆ ಮಾಡುವ ಉದ್ದೇಶವಿಟ್ಟುಕೊಂಡು, ಸುಳ್ಳು ಕೇಸು ಹೆಣೆದು ಪೊಲೀಸರೆದುರು ಶರಣಾಗತಿಯಾಗಿದ್ದರು. ಬಳಿಕ ಇವರನ್ನು ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಲಾಲೂ ಜೊತೆಯಲ್ಲಿದ್ದರು.

LEAVE A REPLY