ಆಸ್ಪತ್ರೆಯಲ್ಲಿ ಮೃತ ಎಂದು ಘೋಷಿಸಿದ ಶಿಶು ಜೀವಂತ

ನವದೆಹಲಿ : ಕೇಂದ್ರ ಸರ್ಕಾರದ ಆಸ್ಪತ್ರೆಯೊಂದರ ಸಿಬ್ಬಂದಿಯಿಂದ `ಮೃತಪಟ್ಟಿದೆ’ ಎಂದು ಘೋಷಿಸಲ್ಪಟ್ಟ ನವಜಾತ ಶಿಶುವೊಂದು ಅಂತ್ಯ ಸಂಸ್ಕಾರಕ್ಕೆ ಕ್ಷಣ ಮಾತ್ರದಲ್ಲಿ ಜೀವಂತವಿರುವುದು ಕುಟುಂಬ ಸದಸ್ಯರಿಗೆ ಅಚ್ಚರಿ ಮೂಡಿಸಿದ ಘಟನೆ ಇಲ್ಲಿ ನಿನ್ನೆ ನಡೆದಿದೆ.

ಬದರ್ಪುರದ ನಿವಾಸಿ ಮಹಿಳೆಯೊಬ್ಬರು ಸಫ್ತರ್‍ಗಂಜ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಮಗು, ಉಸಿರಾಟ ನಡೆಸುತ್ತಿರುವ ಬಗ್ಗೆ ಗುರುತಿಸಲು ನರ್ಸಿಂಗ್ ಸಿಬ್ಬಂದಿ ವಿಫಲರಾಗಿ ಮಗು ಸತ್ತಿದೆ ಎಂದು ಹೇಳಿದ್ದರು.