4 ಕಾಲು, 2 ಜನನಾಂಗ ಹೊಂದಿರುವ ಮಗು ಜನನ

ರಾಯಚೂರು : ನಾಲ್ಕು ಕಾಲು ಮತ್ತು ಎರಡು ಪುರುಷ ಜನನಾಂಗಗಳನ್ನು ಹೊಂದಿರುವ ವಿಶಿಷ್ಟ ಮಗುವೊಂದು ರಾಯಚೂರಿನಲ್ಲಿ ಜನಿಸಿದೆ. 23 ವರ್ಷದ ಲಲಿತಮ್ಮ ಎಂಬ ಮಹಿಳೆ ಧಡಸುಗುರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮುಂಜಾನೆ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಶಿಶುವನ್ನು ಬಳ್ಳಾರಿಯ ವಿಜಯನಗರ ಮೆಡಿಕಲ್ ಸೈನ್ಸ್ ಇನ್‍ಸ್ಟಿಟ್ಯೂಟಿಗೆ ಒಯ್ದು ಅಲ್ಲಿ ನವಜಾತ ಶಿಶು ಆರೋಗ್ಯ ಕೇಂದ್ರದಲ್ಲಿ ನಿಗಾ ವಹಿಸಲಾಗುತ್ತಿದೆ.

ಮಗುವಿನ ತಾಯಿ ಪ್ರಾರಂಭದಲ್ಲಿ ಮಗುವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಯದಿಂದ ಕೊಂಡೊಯ್ಯಲು ನಿರಾಕರಿಸಿದ್ದಾಳೆ.  ಆಕೆಯ ಕುಟುಂಬ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಮನವೊಲಿಸಿದ ಬಳಿಕ ಒಪ್ಪಿಕೊಂಡಿದ್ದಾಳೆ.

ಇದೊಂದು ವೈದ್ಯಲೋಕಕ್ಕೆ ಸವಾಲಾದ ಪ್ರಕರಣವಾಗಿದ್ದು, ಶಸ್ತ್ರಚಿಕಿತ್ಸಾ ವೈದ್ಯರ ತಂಡವು ಶಿಶುವಿನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ಡಾ ದಿವಾಕರ್ ಗಡ್ಡಿ ಹೇಳಿದ್ದಾರೆ.