ಬಾಬ್ರಿ ಮಸೀದಿ ಪ್ರಕರಣ ತೀರ್ಪು : ಆಡ್ವಾಣಿ ಮನೆಯಲ್ಲಿ ಜೋಶಿ ಚರ್ಚೆ

ನವದೆಹಲಿ : ಬಾಬ್ರಿ ಮಸೀದಿ ನೆಲಸಮ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಿನ್ನೆ ನೀಡಿದ ತೀರ್ಪಿನ ಬಳಿಕ ಬಿಜೆಪಿ ಮುಖಂಡ ಮುರಳಿ ಮನೋಹರ ಇನ್ನೊಬ್ಬ ನಾಯಕ ಎಲ್ ಕೆ ಆಡ್ವಾಣಿಯನ್ನು ಭೇಟಿಯಾಗಿ ಮುಂದಿನ ನಡೆ ಬಗ್ಗೆ ಚರ್ಚಿಸಿದರು.

ಜೋಶಿ, ಆಡ್ವಾಣಿ ಸಹಿತ ಬಿಜೆಪಿಯ ಕೆಲವು ನಾಯಕರ ವಿರುದ್ಧ ಈ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ಆರೋಪ ಖಾಯಂಗೊಳಿಸಲು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಆಡ್ವಾಣಿ ಬಂಗಲೆಯಲ್ಲಿ ಜೋಶಿ ಸುಮಾರು 40 ನಿಮಿಷ ತೀರ್ಪಿನ ರಾಜಕೀಯ ಮತ್ತು ಕಾನೂನಾತ್ಮಕ ಪರಿಣಾಮಗಳ ಬಗ್ಗೆ ಮಾತುಕತೆ ನಡೆಸಿದರು. ಇದೇ ಪ್ರಧಾನಿ ಮೋದಿ ತನ್ನ ನಿವಾಸದಲ್ಲಿ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ ಸಿಂಗ್, ನಿತಿನ್ ಗಡ್ಕರಿ ಮತ್ತು ವೆಂಕಯ್ಯ ನಾಯ್ಡು ಜೊತೆ ಈ ವಿಷಯ ಚರ್ಚಿಸಿದರು.