`ಯೇ ಹೈ ಇಂಡಿಯಾ’ ಚಿತ್ರದಲ್ಲಿ ಬಾಬಾ ರಾಮದೇವ್

ಇಷ್ಟು ದಿನ ಯೋಗ ಮತ್ತು `ಪತಂಜಲಿ’ ಉತ್ಪನ್ನಗಳಿಂದ ಫೇಮಸ್ ಆಗಿರುವ ಯೋಗ ಗುರು ಬಾಬಾ ರಾಮದೇವ್ ಈಗ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. `ಯೇ ಹೈ ಇಂಡಿಯಾ’ ಚಿತ್ರದಲ್ಲಿ ಅವರು ಸೈಯಾನ್ ಸೈಯಾನ್ ಎನ್ನುವ ಹಾಡಿನಲ್ಲಿ ನಟಿಸಲಿದ್ದಾರೆಯಂತೆ.

`ಯೇ ಹೈ ಇಂಡಿಯಾ’ ಚಿತ್ರದ ಸಾಹಿತ್ಯ ಮತ್ತು ನಿರ್ದೇಶನದ ಹೊಣೆಯನ್ನು ಲೋಮ್ ಹರ್ಷ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಾವೈ ಚಹಾಲ್ ಮತ್ತು ಡಿಯಾನಾ ಉಪ್ಪಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

“ಇಡೀ ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ, ಈ ಬದಲಾವಣೆಯನ್ನು `ಯೇ ಹೈ ಇಂಡಿಯಾ’ ಚಿತ್ರದಲ್ಲಿ ಪ್ರದರ್ಶಿಸಲಾಗಿದೆ. ಆದ್ದರಿಂದ ಬಹಳಷ್ಟು ಚಿಂತನೆಯ ನಂತರ ನಾನು ಈ ಚಿತ್ರಕ್ಕೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿದ್ದೇನೆ” ಎನ್ನುತ್ತಾರೆ ರಾಮದೇವ್. ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ.