ಶಿವಗಾಮಿ, ಕಟ್ಟಪ್ಪ ರೊಮ್ಯಾನ್ಸ್ !

ಇದೇನಪ್ಪಾ `ಬಾಹುಬಲಿ-2′ ಚಿತ್ರದಲ್ಲಿ ಮಾಹಿಷ್ಮತಿ ಸಾಮ್ರಾಜ್ಯದ ರಾಜಮಾತಾ ಶಿವಗಾಮಿ ಮತ್ತು ಅಂಗರಕ್ಷಕ ಕಟ್ಟಪ್ಪ ನಡುವೆ ರೊಮ್ಯನ್ಸ್ ಇದ್ದಿದ್ದು ನಾವ್ಯಾರೂ ನೋಡೇ ಇಲ್ವಲ್ಲ…ನಮಗೇ ಆ ಸೀನ್ ಮಿಸ್ ಆಯ್ತಾ ಅಂತ ತಲೆಕೆಡಿಸಿಕೊಳ್ಳುವುದೇನೂ ಬೇಡ. ಯಾಕೆಂದರೆ ಇದು ಸಿನಿಮಾದ ದೃಶ್ಯವೇನೂ ಅಲ್ಲ. ಬದಲಾಗಿ ಜಾಹೀರಾತೊಂದರ ತುಣುಕು.

`ಬಾಹುಬಲಿ’ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದ ರಮ್ಯಾಕೃಷ್ಣ ಮತ್ತು ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಇಬ್ಬರೂ ಜಾಹೀರಾತಿನಲ್ಲಿ ಸತಿ-ಪತಿಗಳಾಗಿ ಕಾಣಿಸಿಕೊಂಡಿದ್ದು ಅವರ ಕಾಸ್ಟ್ಯೂಮ್ಸ್, ಗೆಟಪ್ ಎಲ್ಲವೂ `ಬಾಹುಬಲಿ’ ಚಿತ್ರದ ರೀತಿಯಲ್ಲಿಯೇ ಇದೆ. ಜಾಹೀರಾತಿನಲ್ಲಿ ಇವರಿಬ್ಬರ ಪ್ರೇಮಜಗಳ ನೋಡಲು ಮಜವಾಗಿದೆ. ಇದೊಂದು ಸೀರೆಮಳಿಗೆ ಜಾಹೀರಾತಾಗಿದ್ದು `ಬಾಹುಬಲಿ’ ಸಿನಿಮಾದ ಯಶಸ್ಸನ್ನು ಜಾಹೀರಾತುದಾರರು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಈ ವೀಡಿಯೋ ಈಗ ಸಕತ್ ವೈರಲ್ ಆಗಿಬಿಟ್ಟಿದೆ.