ನಿಜಜೀವನದಲ್ಲೂ ಒಂದಾಗುತ್ತಿದೆಯಾ `ಬಾಹುಬಲಿ’ ಜೋಡಿ?

`ಬಾಹುಬಲಿ-2′ ಚಿತ್ರ ಹೇಗೆ ಸಿನಿಪ್ರೇಕ್ಷಕರಿಗೆ ಇಷ್ಟವಾಯಿತೋ ಅದೇ ರೀತಿ ಚಿತ್ರದಲ್ಲಿಯ ಬಾಹುಬಲಿ-ದೇವಸೇನಾ ಜೋಡಿಯ ಮೇಲೂ  ಎಲ್ಲರ ಕಣ್ಣು ಬಿದ್ದಿದೆ. ಆ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯ ರೀಲ್ ಲೈಫ್ ಹಾಗೂ ರಿಯಲ್ ಲೈಫ್ ಅದ್ಭುತ ಕೆಮೆಸ್ಟ್ರಿ ಬಗ್ಗೆ ಅವರ ಫ್ಯಾನ್ ಕ್ಲಬ್ಬಿನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ ಅವರ ಫ್ಯಾನ್ ಪೇಜಿನಲ್ಲಿ ಅವರಿಬ್ಬರೂ ಜೊತೆಗಿರುವ ಹಲವಾರು ಫೊಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅವರಿಬ್ಬರೂ ಕೆಲವಾರು ಚಿತ್ರಗಳಲ್ಲಿ ನಟಿಸಿದ್ದು ಆ ಜೋಡಿಯನ್ನು ಚಿತ್ರಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಪ್ರಭಾಸ್ ಹಾಗೂ ಅನುಷ್ಕಾ ನಿಜ ಜೀವನದಲ್ಲೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ ಮೊದಲಿಂದಲೂ ಕೇಳಿಬಂದಿತ್ತು. ಈಗ ಆ ಸುದ್ದಿ ಇನ್ನೊಮ್ಮೆ ರೌಂಡ್ ಹೊಡೆಯುತ್ತಿದೆ.

ಪ್ರಭಾಸ್ ಮದುವೆ ಬಗ್ಗೆ ಅವನ ಪಾಲಕರು ಈಗ ತರಾತುರಿ ಮಾಡುತ್ತಿದ್ದಾರೆ. 37 ವಯಸ್ಸಿನ ಪ್ರಭಾಸಗೆ 6000 ಪ್ರಪೋಸಲ್ಲುಗಳು ಬಂದಿದ್ದರೂ ಅವನ್ನೆಲ್ಲ ಆತ ತಿರಸ್ಕರಿಸಿದ್ದಾನೆ. ಇಷ್ಟು ಸಮಯ `ಬಾಹುಬಲಿ’ ಸಿನಿಮಾಗಾಗಿ ಪ್ರಭಾಸ್ ಮದುವೆ ಮುಂದೂಡುತ್ತಲೇ ಬಂದಿದ್ದ. ಈ ಕಡೆ ಅನುಷ್ಕಾ ಶೆಟ್ಟಿಗೂ ಸಹ 35 ವರ್ಷವಾಗಿದ್ದು ಅವಳೂ ಅದೇ ನೆವ ಹೇಳಿ ಮದುವೆ ಮುಂದೂಡಿದ್ದಳು. ಪ್ರಭಾಸ್-ಅನುಷ್ಕಾ ಮೊದಲಿಂದಲೂ ಸ್ನೇಹಿತರು. ಎಲ್ಲೇ ಅವರು ಜೊತೆಯಲ್ಲಿ ಹೋಗಲಿ ಅವರ ಕೆಮೆಸ್ಟ್ರಿ ನೋಡಿದರೆ ಅವರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧ ಇದೆ ಎನ್ನುವುದು ಬರಿಗಣ್ಣಿಗೆ ಕಾಣುವಷ್ಟು ನಿಚ್ಚಳವಾಗಿದೆ.

ಕಳೆದ ವಾರ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿಗೆ `ಪ್ರಭಾಸ್ ಹಾಗೂ ರಾಣಾ ನಡುವೆ ಯಾರು ಹೆಚ್ಚು ಸೆಕ್ಸೀ?’ ಎಂದು ಕೇಳಲಾಗಿತ್ತು. ಅದಕ್ಕೆ ಅನುಷ್ಕಾ ಸ್ವಲ್ಪವೂ ಯೋಚಿಸದೇ ಹೇಳಿದ್ದು ಪ್ರಭಾಸ್ ಹೆಸರು. ಅಷ್ಟೇ ಅಲ್ಲ ರಾಣಾ ನನಗೆ ಸಹೋದರನಂತೆ ಎಂದು ಹೇಳಿದ್ದಾಳೆ. ಹಾಗಿದ್ದರೆ ಪ್ರಭಾಸ್ ಅವಳಿಗೆ ಏನಾಗಬೇಕು…ಅನುಷ್ಕಾಳೇ ಉತ್ತರಿಸಬೇಕಿದೆ.