ಭೂಮಿ ಜೊತೆ ಇನ್ನೊಮ್ಮೆ ಆಯುಷ್ಮಾನ್ ರೊಮ್ಯಾನ್ಸ್

`ಧಮ್ ಲಗಾ ಕೆ ಹೈಸಾ’ ಚಿತ್ರದಲ್ಲಿ ಭೂಮಿ ತೂಕದ ಹುಡುಗಿ ಭೂಮಿ ಪಡ್ನೆಕರ್ ಜೊತೆ ಲವ್-ಹೇಟ್ ಡ್ರಾಮಾ ಮಾಡಿದ್ದ ಆಯುಷ್ಮಾನ್ ಖುರಾನಾ ಈಗ ಇನ್ನೊಮ್ಮೆ ಆಕೆ ಜೊತೆ `ಶುಭ ಮಂಗಲ ಸಾವಧಾನ’ ಹೇಳಲಿದ್ದಾನೆ. ಹೌದು, ಆಯುಷ್ಮಾನ್-ಭೂಮಿಯ ಮುಂದಿನ ಚಿತ್ರದ ಹೆಸರು `ಶುಭ ಮಂಗಲ ಸಾವಧಾನ’.
ಇದೊಂದು ಲವ್ ಕಾಮಿಡಿ ಚಿತ್ರವಾಗಿದ್ದು ಈ ಚಿತ್ರವನ್ನು ಆರ್ ಎಸ್ ಪ್ರಸನ್ನ ನಿರ್ದೇಶಿಸುತ್ತಿದ್ದು ಆನಂದ್ ಎಲ್ ರೈ ಈರೋಸ್ ಜೊತೆಗೂಡಿ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಆಯುಷ್ಮಾನ್ ಪರಿಣೀತಿ ಚೋಪ್ರಾ ಜೊತೆ `ಮೆರಿ ಪ್ಯಾರಿ ಬಿಂದು’ ಚಿತ್ರದಲ್ಲಿ ನಟಿಸುತ್ತಿದ್ದಾನೆ. ಈಗ ಸ್ಲಿಮ್ ಆಂಡ್ ಟ್ರಿಮ್ ಆಗಿರುವ ಭೂಮಿ ಅಕ್ಷಯ್ ಕುಮಾರ್ ಜೊತೆ `ಟಾಯ್ಲೆಟ್ -ಏಕ್ ಪ್ರೇಮ್ ಕಥಾ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅದಾದ ಬಳಿಕ ಈ ಹೊಸ ಪ್ರಾಜೆಕ್ಟ್ ಶುರುವಾಗಲಿದೆ.