ವ್ಯಾಧಿಗಳಿಗೆ ಆರ್ಯುವೇದ ರಾಮಬಾಣ

ಹಿತಲ ಗಿಡ ಮದ್ದಲ್ಲ ಎಂಬಂತೆ ನಾವು ಎಲ್ಲದಕ್ಕೂ ಇಂಗ್ಲಿಷ್ ಮದ್ದಿಗೆ ಮಾರು ಹೋಗುವುದು ಎಂತಹ ವಿಪರ್ಯಾಸ. ಆರ್ಯುವೇದ ಸಣ್ಣ ಪ್ರಮಾಣದ ಗಿಡಗಳನ್ನು ನಮ್ಮ ಮನೆಯ ಟಾರಸಿ ಮೇಲೆ ಬೆಳೆಸಬಹುದು. ಅದರಲ್ಲೂ ಅಮೃತಬಳ್ಳಿ, ತುಳಸಿ, ಹಸಿಶುಂಠಿ, ಕರಿಬೇವು, ಕರಿತುಳಸಿ, ಮಜ್ಜಿಗೆ ಸೊಪ್ಪು, ಹೀಗೆ ಹಲವಾರು ಗಿಡಗಳನ್ನು ನಾವು ಬೆಳೆಸಬಹುದು. ಕೆಮ್ಮಿಗೆ ತುಳಸಿರಸ ಹಾಗೂ ಜೇನುತುಪ್ಪ ಬೆರೆಸಿ ಸ್ವಲ್ಪ ಕುಡಿದರೆ ಕೆಮ್ಮು ಮಾಯ. ಹೀಗೆ ಇನ್ನಿತರ ಹಲವು ಸೊಪ್ಪುಗಳೂ ಆರೋಗ್ಯಕ್ಕೆ ಒಳ್ಳೆಯದೇ. ನಮ್ಮಲ್ಲಿ ನಂಬಿಕೆಯಿರಬೇಕಷ್ಟೆ ಹೀಗೆ ಎಲ್ಲ ದೃಷ್ಟಿಯಲ್ಲಿ ಆರ್ಯುವೇದಕ್ಕೆ ಬಹಳ ಪ್ರಾಶಸ್ತ್ಯವಿದೆ. ಆದ ಕಾರಣ ಸರ್ವ ರೋಗಕ್ಕೂ ಆರ್ಯುವೇದವೇ ರಾಮಬಾಣ

  • ಎಸ್ ಎಂ  ಪುತ್ತೂರು