ಅಯೋಧ್ಯೆ ವಿವಾದ : ಸಂಧಾನ ಯತ್ನಕ್ಕೆ ವಿರೋಧಗಳೇ ಅಧಿಕ

ಲಕ್ನೋ : ಅಯೋಧ್ಯೆ ವಿವಾದಕ್ಕೆ ನ್ಯಾಯಾಲಯದಿಂದ ಹೊರಗೆ ಪರಿಹಾರ ಕಂಡುಹಿಡಿಯಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ಹಾಗೂ  ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಇದೀಗ ಹೊರ ಬಂದಿರುವ ಮೌಲಾನ ಸಲ್ಮಾನ್ ನದ್ವಿ ಪ್ರಯತ್ನಿಸುತ್ತಿದ್ದರೂ ಅದಕ್ಕೆ  ಹೆಚ್ಚಿನವರ ಬೆಂಬಲವಿಲ್ಲ.

ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹಾಗೂ ನದ್ವಿ ಹೊರತುಪಡಿಸಿ ಅಯೋಧ್ಯೆವಿವಾದದ ನ್ಯಾಯಾಲಯದ ಪ್ರಕರಣದಲ್ಲಿ ಭಾಗಿಯಾಗಿರುವ ಹಿಂದೂ ಮತ್ತು ಮುಸ್ಲಿಂ ನಾಯಕರಲ್ಲಿ ಯಾರೂ ಕೂಡ ಇದರಲ್ಲಿ ಆಸಕ್ತಿ ವಹಿಸಿಲ್ಲ ಹಾಗೂ ನ್ಯಾಯಾಲಯದ ಹೊರಗೆ ಈ ವಿವಾದಕ್ಕೆ ಪರಿಹಾರ ಕಂಡು ಹಿಡಿಯುವ ಯೋಜನೆಯನ್ನೂ ಹೆಚ್ಚಿನವರು ತಿರಸ್ಕರಿಸಿದ್ದಾರೆ.

ಈ ಕೋರ್ಟ್ ಪ್ರಕರಣದಲ್ಲಿ ಭಾಗಿಯಾಗಿರುವವರು  ಮಾತ್ರ  ಅದನ್ನು ನ್ಯಾಯಾಲಯದ ಹೊರಗೆ ಪರಿಹರಿಸುವ ಹಕ್ಕು ಹೊಂದಿದ್ದಾರೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.

ವಿಶ್ವ ಹಿಂದು ಪರಿಷದ್ ಕೂಡ ಸಂಧಾನ ಪ್ರಯತ್ನಗಳ ಯಶಸ್ಸಿನ ಬಗ್ಗೆ ಸಂಶಯ ಹೊಂದಿದೆ. “ವಿವಾದಿತ ಸ್ಥಳದಲ್ಲಿ  ಯಾವುದೇ ಮಸೀದಿಯನ್ನು ಒಪ್ಪಲು ಸಾಧ್ಯವಿಲ್ಲ. ರವಿಶಂಕರ್ ಅವರ ಸಂಧಾನ ಯತ್ನಗಳು ನಿಷ್ಪ್ರಯೋಜಕ”  ಎಂದು ಹಿರಿಯ ವಿಹಿಂಪ ನಾಯಕರೊಬ್ಬರು ತಿಳಿಸುತ್ತಾರೆ.

ಈ ವಿವಾದದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪಾತ್ರವೇನು ಎಂದು ಪ್ರಕರಣದಲ್ಲಿ ದೂರುದಾರರಲ್ಲೊಬ್ಬರಾಗಿರುವ ಹಾಜಿ ಮೆಹಬೂಬ್ ಪ್ರಶ್ನಿಸುತ್ತಾರೆ.

 

 

LEAVE A REPLY