ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೂಟಾಟಿಕೆ ಮಾತ್ರವೇ

ಪಾರ್ಲಿಮೆಂಟ್ ಮತ್ತು ಉತ್ತರ ಪ್ರದೇಶ ಚುನಾವಣೆ ಘೋಷಣೆಯಾದ ಕೂಡಲೇ ಬಿಜೆಪಿಯವರಿಗೆ ಥಟ್ಟನೆ ನೆನಪಿಗೆ ಬರುವುದು ರಾಮಮಂದಿರ ನಿರ್ಮಾಣ  ಹಿಂದೂಗಳ ಶ್ರದ್ಧಾಭಕ್ತಿ ಕೇಂದ್ರವಾದ ಅಯೋಧ್ಯಾ ರಾಮಮಂದಿರ ಇನ್ನೂ ಆರಂಭವಾಗಿಲ್ಲ ಯಾಕೆ   ಎಲ್ಲವನ್ನೂ ಗುರಿ ಮುಟ್ಟಿಸುವ ಮೋದಿ ಸರಕಾರಕ್ಕೆ ಏಕೆ ಇದರ ಕಾಮಗಾರಿ ಆರಂಭ ಮಾಡಲು ಇನ್ನೂ ಯಾಕೆ ಸಾಧ್ಯವಾಗಿಲ್ಲ   ಕೇಂದ್ರದಲ್ಲಿ ಬಿಜೆಪಿ ಬಹುಮತ ಬಂದರೆ ರಾಮ ಮಂದಿರ ಶೀಘ್ರದಲ್ಲೇ ನಿರ್ಮಾಣ ಎಂಬ ಮೋದಿ ಮೋದಿ ಏನಾಯಿತು   ಅಂದು ಎಲ್ಲಾ ಕಡೆಗಳಿಂದ ಭಯ ಭಕ್ತಿಯಿಂದ ಪೂಜೆ ಮಾಡಿ ಕಳುಹಿಸಿದ ಇಟ್ಟಿಗೆ ಎಲ್ಲಿ ಮಾಯವಾಗಿ ಹೋಯಿತು   ಸ್ವಾಮಿಗಳು  ಬಿಜೆಪಿ ಲೀಡರುಗಳು ಎಲ್ಲಿ   ಕೇಂದ್ರದಲ್ಲಿ ಬಿಜೆಪಿ ಸರಕಾರವಿರುವಾಗಲೇ ರಾಮಮಂದಿರ ನಿರ್ಮಾಣ ಆಗದೇ ಇರುವಾಗ ಯುಪಿಎ ಸರಕಾರ ಇರುವಾಗ ಯಾಕೆ ರಾಮಮಂದಿರ ನಿರ್ಮಾಣದ ಕನಸು ಕಾಣುತ್ತಿದ್ದುದು   ಈಗ ನಿಮ್ಮದೇ ಸರಕಾರ ಕೇಂದ್ರದಲ್ಲಿ ಇರುವಾಗ ರಾಮಮಂದಿರ ಕಟ್ಟಲು ಯಾರಿಂದ ಅಡ್ಡಿಯಾಗಿದೆ

  • ಬಿ ಆರ್ ಕೆ  ಪುತ್ತೂರು