ಎನ್ನೆಸ್ಸೆಸ್ ವಿದ್ಯಾರ್ಥಿ ಕಾರ್ಯಕರ್ತರಿಂದ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಜಾಗೃತಿ

ಮಂಗಳೂರು : ನಗರದಲ್ಲಿ ಈಗ ಮತ್ತೊಂದು ಬಾರಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಹೋರಾಟ ಕಂಡು ಬಂದಿದೆ. ರಾಷ್ಟ್ರೀಯ ಸೇವಾ ಯೋಜನೆಯ (ಎನ್ನೆಸ್ಸೆಸ್) 100ಕ್ಕೂ ಹೆಚ್ಚು ಕಾರ್ಯಕರ್ತರು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಸಂದೇಶ ಮೂಡಿಸುತ್ತಿದ್ದಾರೆ. ಜೊತೆಗೆ ವಿಭಿನ್ನ ಸಂಘಟನೆಗಳು ಯುವಜನತೆಯಲ್ಲಿ ಅರಿವು ಮೂಡಿಸುತ್ತಿವೆ.

ಹಂಪನಕಟ್ಟೆಯ ವಿ ವಿ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕರ್ತರು ಭವಿಷ್ಯದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪ್ರತ್ಯೇಕೀರಣಗೊಳಿಸುತ್ತಿದ್ದು, ಇದೀಗ ಕಾಲೇಜು ಕ್ಯಾಂಪಸ್ಸಿನೊಳಗೂ ಈ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ  ಜಾಗೃತಿ ಮೂಡಿಸುತ್ತಿದ್ದಾರೆ.

ಇದೀಗ ಜಿಲ್ಲೆಯ 10 ಶಾಲೆಗಳ ವಿದ್ಯಾರ್ಥಿಗಳು ಈ ಚಳುವಳಿಯಲ್ಲಿ ಕೈಜೋಡಿಸಿದ್ದಾರೆ. `ನಾನು 2015ರಿಂದ ಮನೆಯ ಪ್ಲಾಸಿಕ್ ತ್ಯಾಜ್ಯ ಪ್ರತ್ಯೇಕೀಕರಿಸಲು ಆರಂಭಿಸಿದ್ದೆ. ಇದನ್ನು ಮಾರಾಟ ಮಾಡಿ ತಾನು ಕಳೆದ ವರ್ಷ 300 ರೂ ಗಳಿಸಿದ್ದೆ. ಇತರ ವಿದ್ಯಾರ್ಥಿಗಳಿಗೆ ಇದು ಮಾದರಿಯಾಗಿದೆ’ ಎಂದು ಮೂಡುಂಗಾರುಕಟ್ಟೆ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯ ವಿದ್ಯಾರ್ಥಿನಿ ಸಮೀಮಾ ಹೇಳಿದರು. ಜನ ಶಿಕ್ಷಣ ಟ್ರಸ್ಟ್ (ಜೆಎಸ್‍ಟಿ) ಮತ್ತು ಅಪ್ನಾ ದೇಶ ಆಯೋಜಿಸಿದ್ದ ಕಾರ್ಯಕ್ರಮವೊಂದರಿಂದ ಈ ವಿದ್ಯಾರ್ಥಿಗಳು ಉತ್ತೇಜಿತರಾಗಿದ್ದಾರೆ. 2005ರಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಚಳುವಳಿ ಆರಂಭಿಸಲಾಗಿತ್ತು ಎಂದು ಜೆಎಸ್‍ಟಿ ನಿರ್ದೇಶಕ ಶೀನ ಶೆಟ್ಟಿ ತಿಳಿಸಿದರು. ಎನ್ನೆಸ್ಸೆಸ್ ಕಾರ್ಯಕರ್ತರು ಉತ್ತಮ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ ಎಂದು ವಿವಿ ಕಾಲೇಜು ಪ್ರಾಂಶುಪಾಲ ಉದಯಕುಮಾರ್ ನುಡಿದರು.