ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಇನ್ನೂ ನೋಂದಣಿಯಾಗದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿಯಾದ ಬಳಿಕ ಪಲ್ಟಿ ಹೊಡೆದ ಘಟನೆ ಕೇಪು ಗ್ರಾಮದಲ್ಲಿ ನಡೆದಿದೆ.

ವಿಟ್ಲದಿಂದ ಕೇಪು ಕಡೆಗೆ ಸಂಚರಿಸುತ್ತಿದ್ದ ಹೊಚ್ಚ ಹೊಸ ರಿಕ್ಷಾವೊಂದು ಕೇಪು ಗ್ರಾಮದ ಕರ್ಲುಟ್ಟಿಯಡ್ಕ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಜಖಂಗೊಂಡ ಆಟೋ ರಸ್ತೆ ಬದಿಯ ಚರಂಡಿಯಲ್ಲಿ ಅಡಿಮೇಲಾಗಿ ಬಿದ್ದಿದ್ದು, ಮಂಗಳವಾರ ತಡರಾತ್ರಿಯ ಬಳಿಕ ದುರ್ಘಟನೆ ಸಂಭವಿಸಿದೆ. ಆಟೋ ಯಾರಿಗೆ ಸೇರಿದ್ದು, ಗಾಯಾಳುಗಳು ಯಾರು ಮತ್ತು ಎಲ್ಲಿಯವರೆಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.