ಡಿವೈಡರಿಗೆ ಬೈಕ್ ಡಿಕ್ಕಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಲ್ಪೆ ಸಮೀಪದ ಪಡುತೋನ್ಸೆ ಗ್ರಾಮದ ಹೂಡೆ ಬೆಂಗ್ರೆ ನಿವಾಸಿ ಕಾರ್ತಿಕ್ ತಿಂಗಳಾಯ ತನ್ನ ಬೈಕನ್ನು ರಾಷ್ಟ್ರೀಯ ಹೆದ್ದಾರಿ-66ರ ಬ್ರಹ್ಮಾವರ ಸಮೀಪದ ಹೇರೂರು ಗ್ರಾಮದ ಸಿದ್ದಿ ವಿನಾಯಕ ಎಂಟರಪೈಸೆಸ್ಸ್ ಎದುರುಗಡೆ ಏಕಮುಖ ಸಂಚಾರದ ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.