ರಿಕ್ಷಾ ಸಮುದ್ರಕ್ಕೆ ಬಿದ್ದರೂ ಅದೃಷ್ಟಕ್ಕೆ ಚಾಲಕ ಪಾರು

ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ಇಲ್ಲಿಯ ರಾಮತೀರ್ಥದ ಬಳಿ ಬುಧವಾರ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದೆ.

ಅದೃಷ್ಟವಶಾತ್ ರಿಕ್ಷಾದಲ್ಲಿ ಯಾವುದೇ ಪ್ರಯಾಣಿಕರು ಇರದಿದ್ದ ಕಾರಣ ಯಾವುದೇ ಹೆಚ್ಚಿನ ಅವಘಡ ಸಂಭವಿಸಿಲ್ಲ. ಚಾಲಕನೂ ಸಹ ರಿಕ್ಷಾ ಬೀಳುವ ಸಮಯದಲ್ಲಿ ಪಕ್ಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ರಿಕ್ಷಾ ಯಾರಿಗೆ ಸಂಬಂಧಪಟ್ಟಿದ್ದು ಎಂದು ತಿಳಿಯಬೇಕಾಗಿದೆ. ರಿಕ್ಷಾವನ್ನು ಕ್ರೇನಿನ ಮೂಲಕ ಮೇಲೆತ್ತಲಾಗಿದ್ದು ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.