ದನ ಅಡ್ಡ ಬಂದು ನಿಯಂತ್ರಣ ತಪ್ಪಿದ ರಿಕ್ಷಾ ಮಗುಚಿ ನಾಲ್ವರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಉಪ್ಪಳ ಸಮೀಪದ ಸೋಂಕಾಲಿನಲ್ಲಿ ದನ ಅಡ್ಡ ಬಂದು ನಿಯಂತ್ರಣ ತಪ್ಪಿದ ರಿಕ್ಷಾ ಮಗುಚಿ ಪ್ರಯಾಣಿಕ ಮಹಿಳೆ ಸಹಿತ ಇಬ್ಬರು ಮಕ್ಕಳು, ಚಾಲಕ ಗಾಯಗೊಂಡಿದ್ದಾರೆ. ಮಂಗಲ್ಪಾಡಿ ತಿಂಬರ ನಿವಾಸಿ ಫೌಸಿಯಾ (31) ಇವರ ಮಕ್ಕಳಾದ ನೌಫೀರ (10), ರೈಫಾ (4) ಎಂಬವರು ಗಾಯಗೊಂಡು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೊಗ್ರಾಲ್ ಪುತ್ತೂರಿನಲ್ಲಿ ಮದುವೆಯಿಂದ ಮರಳುತ್ತಿದ್ದಾಗ ರಾತ್ರಿ 7.30ರ ವೇಳೆ ಕೈಕಂಬದಿಂದ ರಿಕ್ಷಾ ಬಾಡಿಗೆ ಹಿಡಿದು ತೆರಳುತ್ತಿದ್ದಾಗ ಸೋಂಕಾಲಿನಲ್ಲಿ ದನ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.