ರಿಕ್ಷಾ ಚಾಲಕಗೆ ಹೃದಯಾಘಾತ

ಮಂಜೇಶ್ವರ  : ಹಲವು ವರ್ಷಗಳಿಂದ ರಿಕ್ಷಾ ಚಾಲಕನಾಗಿ ಜೀವನ ನಿರ್ವಹಿಸುತ್ತಿದ್ದ ಯುವಕ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ಬಾಯಾರು ಸನಿಹದ ಪೆÇಸಡಿಗುಂಪೆ ದಿ ಈಶ್ವರ ನಾಯ್ಕ್ ಎಂಬವರ ಪುತ್ರ ಬಾಲಚಂದ್ರ (33) ಮೃತ ದುರ್ದೈವಿ. ಮುಂಜಾನೆ ಎದ್ದು ಡಿಪೆÇೀಗೆ ಹಾಲು ಕೊಂಡೊಯ್ಯಲು ತೆರಳುತ್ತಿದ್ದ ಬಾಲಚಂದ್ರ ಬೆಳಿಗ್ಗೆ ಏಳದೇ ಇದ್ದಾಗ ಸಂಶಯಗೊಂಡ ಮನೆಯವರು ಕೊಠಡಿಗೆ ತೆರಳಿ ಪರೀಕ್ಷಿಸಿದಾಗ ಮೃತಪಟ್ಟಿದ್ದಾರೆಂದು ತಿಳಿದಿದೆ.  ಜನಸ್ನೇಹಿಯಾಗಿದ್ದ ಇವರು ಕಳೆದ 15 ವರ್ಷಗಳಿಂದೀಚೆಗೆ ರಿಕ್ಷಾಚಾಲಕರಾಗಿ ದುಡಿಯುತ್ತಿದ್ದರು.