ಮೆದುಳು ರಕ್ತಸ್ರಾವದಿಂದ ಪೊಲೀಸ್ ವಶದಲ್ಲಿದ್ದ ರಿಕ್ಷಾ ಚಾಲಕ ಸಾವು ?

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆÇಲೀಸರು ವಶಕ್ಕೆ ಪಡೆಯುವಾಗ ಕುಸಿದು ಬಿದ್ದು ಮೃತಪಟ್ಟ ಆಟೋ ಚಾಲಕ ಸಂದೀಪ್ (28) ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಸಂದೀಪ್ ರಕ್ತದೊತ್ತಡದಿಂದ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿರುವುದೇ ಸಾವಿಗೆ ಕಾರಣವೆಂಬುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಲ್ಲಿಕೋಟೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದರ ಸಂಪೂರ್ಣ ವರದಿ ಮಂಗಳವಾರ ಲಭಿಸಲಿರುವುದಾಗಿ ಹೇಳಲಾಗಿದೆ.

ಕಾಸರಗೋಡು ಬೀರಂತಬೈಲು ಕೃಷಿ ಇಲಾಖೆಯ ಸ್ಥಳದಲ್ಲಿ ಬಹಿರಂಗ ಮದ್ಯಪಾನ ಮಾಡುತ್ತಿರುವ ಬಗ್ಗೆ ಬಂದ ದೂರಿನಂತೆ ಕಾಸರಗೋಡು ಪೆÇಲೀಸರು ಅಲ್ಲಿಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಸಂದೀಪ ಜೀಪಿನಲ್ಲಿ ಹತ್ತಿಸುವಾಗ ಕುಸಿದು ಬಿದ್ದು ಈ ದುರ್ಘಟನೆ ನಡೆದಿತ್ತು.