ಟ್ಯಾಂಕರ್ ಡಿಕ್ಕಿ : ಆಟೋ ಚಾಲಕ ಸಾವು

ಅಪಘಾತಕ್ಕಿಡಾದ ಆಟೋ ರಿಕ್ಷಾ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮೊಗ್ರಾಲ್ ಸೇತುವೆ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಬಡುವನ್ ಕುಂಞÂ ಎಂಬವರ ಪುತ್ರ ರಫೀಕ್ ಮೃತಪಟ್ಟಿದ್ದಾರೆ.

ಮೃತ ರಫೀಕ್

ಕುಂಬಳೆ ಸಿಟಿ ಆಟೋ ಸ್ಟ್ಯಾಂಡಿನಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ ರಫೀಕ್ ಬಾಡಿಗೆ ಮುಗಿಸಿ ಮನೆಯ ಕಡೆ ಮರಳುತ್ತಿದ್ದಾಗ ಇವರು ಚಲಾಯಿಸುತಿದ್ದ ರಿಕ್ಷಾಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ರಿಕ್ಷಾದೊಳಗೆ ಸಿಲುಕಿದ್ದ ರಫೀಕನನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ನಿಲ್ಲಿಸದೇ ಪರಾರಿಯಾಗಿದ್ದು, ನಾಗರಿಕರು ನೀಡಿದ ದೂರಿನಂತೆ ಕುಂಬಳೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ.