ಅಪಘಾತ : ರಿಕ್ಷಾ ಚಾಲಕ ಮೃತ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಬಳೆ ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿ ಲಾರಿಯೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಅಪಘಾತದಲ್ಲಿ ಅಟೋಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ.

ಶಾಂತಿಪಳ್ಳ ನಿವಾಸಿ ಕೃಷ್ಣ ಎಂಬವರ ಪುತ್ರ ಕಿರಣ್ (29) ಮೃತ ದುರ್ದೈವಿ. ಕುಂಬಳೆ ಸೇತುವೆಯ  ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಆರಿಕ್ಕಾಡಿಯಿಂದ ಕುಂಬಳೆಯತ್ತ ಆಗಮಿಸುತ್ತಿದ್ದ ಕೆಎಲ್ 14, ಎಲ್ 4243 ಸಂಖ್ಯೆಯ ರಿಕ್ಷಾಕ್ಕೆ ಕುಂಬಳೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಕೆಎ19- ಸಿ 1347 ಸಂಖ್ಯೆಯ ಲಾರಿ ಅತಿವೇಗದಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣವಾಗಿ ಹಾನಿಗೊಂಡಿದೆ. ಅಟೋ ಚಾಲಕ ಕಿರಣರನ್ನು ಕೂಡಲೇ ಕುಂಬಳೆ ಸಹಕಾರಿ ಆಸ್ಪತ್ರೆಗೆ ಕರೆದೊಯಿದ್ದರೂ ಅಷ್ಟರಲ್ಲಿ ಮೃತಪಟ್ಟಿದ್ದರು.