ಬಾಡಿಗೆಗೆ ಕರೆದೊಯ್ದು ರಿಕ್ಷಾ ಚಾಲಕಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮೆಮಾರು-ಕೊಡ್ಮಣ್ ರಸ್ತೆಯ ಪೂಪಾಡಿ ಕಲ್ಲು ಎಂಬಲ್ಲಿ ರಿಕ್ಷಾ ಚಾಲಕ ಫರಂಗಿಪೇಟೆ ನಿವಾಸಿ ಮುಹಮ್ಮದ್ ಇಂತಿಯಾಝ್ ಎಂಬವರನ್ನು ಶುಕ್ರವಾರ ಸಂಜೆ ಬಾಡಿಗೆ ನೆಪದಲ್ಲಿ ಕರೆದೊಯ್ದು ಹಲ್ಲೆಗೆ ಯತ್ನಿಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ರಿಕ್ಷಾ ಚಾಲಕ ಇಂತಿಯಾಝ್ ಶುಕ್ರವಾರ ಸಂಜೆ 4:30ರ ಸುಮಾರಿಗೆ ವ್ಯಕ್ತಿಯೊಬ್ಬ ಕೊಡ್ಮಣ್ ಎಂಬಲ್ಲಿಗೆ ಬಾಡಿಗೆಗೆ ಕರೆದಿದ್ದು, ಬಾಡಿಗೆ ತೆರಳುತ್ತಿದ್ದ ಸಂದರ್ಭ ಅಲ್ಪ ದೂರ ಚಲಿಸಿದಾಗ ರಿಕ್ಷಾದಲ್ಲಿದ್ದ ವ್ಯಕ್ತಿ ಏಕಾಏಕಿ ಕೊರಳ ಪಟ್ಟಿ ಹಿಡಿದೆಳೆದಾಡಿದ್ದು, ದಾಳಿಗೆ ಯತ್ನಿಸಿದ್ದಾನೆ. ಈ ಸಂದರ್ಭ ಅಪಾಯದ ಅರಿವಾದ ಇಂತಿಯಾಝ್ ರಿಕ್ಷಾ ನಿಲ್ಲಿಸಿ, ಸಮೀಪದ ಗುಡ್ಡ ಪ್ರದೇಶಕ್ಕೆ ಓಡಿ ಅವಿತುಕೊಂಡಿದ್ದಾನೆ. ಈ ಸಂದರ್ಭ ರಿಕ್ಷಾ ಇದ್ದ ಸ್ಥಳಕ್ಕೆ ಇಬ್ಬರು ಅಪರಿಚಿತರು ಎಫ್ಝಿ ಬೈಕಿನಲ್ಲಿ ಬಂದು ಹಿಂತಿರುಗಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಇಂತಿಯಾಝ್ ಬಳಿಕ ಅಲ್ಲಿಂದಲೇ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇಂತಿಯಾಝ್ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

LEAVE A REPLY