ಸಂತ ಲಾರೆನ್ಸ್ ಬಸಿಲಿಕ ಅತ್ತೂರು ವಾರ್ಷಿಕ ಮಹೋತ್ಸವ 21ರಿಂದ

ಕಾರ್ಕಳ : ಸಂತ ಲಾರೆನ್ಸ್ ಬಸಿಲಿಕ, ಅತ್ತೂರು ವಾರ್ಷಿಕ ಮಹೋತ್ಸವವು ಜನವರಿ 21, 22, 23 24 ಮತ್ತು 25ರಂದು ನಡೆಯಲಿದೆ. “ಮಹೋತ್ಸವದ ವಿಷಯ : ಬಡವರನ್ನು ಆಧರಿಸುವವರು ಭಾಗ್ಯವಂತನು”.

ಜನವರಿ 21ರಂದು ಮಧ್ಯಾಹ್ನ 3 ಹಾಗೂ 5 ಗಂಟೆಗೆ ಕೊಂಕಣಿಯಲ್ಲಿ ಮಕ್ಕಳಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. 22ರಂದು ಬೆಳಿಗ್ಗೆ 10 ಹಾಗೂ ಮಧ್ಯಾಹ್ನ 3 ಗಂಟೆಗೆ ಕೊಂಕಣಿಯಲ್ಲಿ ವ್ಯಾಧಿಷ್ಠರಿಗಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಮಹೋತ್ಸವದ ಐದೂ ದಿನಗಳಲ್ಲಿ ದಿವ್ಯ ಬಲಿಪೂಜೆಯ ಬಳಿಕ ವ್ಯಾಧಿಷ್ಠರಿಗಾಗಿ ವಿಶೇಷ ಪ್ರಾರ್ಥನಾ ವಿಧಿ ಇರುವುದು. ಭಕ್ತಾದಿಗಳಿಗೆ ವಾಹನಗಳನ್ನು ನಿಲ್ಲಿಸಲು ಬೇಕಾದ ಸ್ಥಳವಕಾಶವನ್ನು ಒದಗಿಸಲಾಗುವುದು. ದೂಪದಕಟ್ಟೆಯಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸಿಲಿಕದ ಸ್ಟಾಲುಗಳಲ್ಲಿ ಎಲ್ಲಾ ರೀತಿ ಧಾರ್ಮಿಕ ವಸ್ತುಗಳು ಹಾಗೂ ಮೊಂಬತ್ತಿಗಳು ಲಭ್ಯವಿರುವವು.

ಸಂತ ಲಾರೆನ್ಸ್ ಬಸಿಲಿಕದಲ್ಲಿ ಪ್ರತಿ ಗುರುವಾರ ಬೆಳಿಗ್ಗೆ 10.15 ಗಂಟೆಗೆ ಜಪಮಾಲೆ, 10.30 ಗಂಟೆಗೆ ಆರಾಧನೆ, 11 ಗಂಟೆಗ ದಿವ್ಯ ಬಲಿಪೂಜೆ, 12 ಗಂಟೆಗೆ ನೊವೆನಾ ಪ್ರಾರ್ಥನೆ, ವ್ಯಾಧಿಷ್ಠರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಇರುವುದು ಎಂದು ಜೋನ್ ಡಿಸಿಲ್ವಾ ಉಪಾಧ್ಯಕ್ಷರು ಸಂತ ಲಾರೆನ್ಸ್ ಧರ್ಮಕೇಂದ್ರದ ಪಾಲನ ಮಂಡಳಿ ಅತ್ತೂರು ಇವರ ಪ್ರಕಟಣೆ ತಿಳಿಸಿದೆ.

 

LEAVE A REPLY