ಸುಪ್ರೀಂ ಆದೇಶ ತಪ್ಪಿಸಿಕೊಳ್ಳಲು ರಂಗೋಲಿ ಕೆಳಗೆ ತೂರುವ ಯತ್ನ

ರಾಜ್ಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೊರಡಿಸಿದ ಆದೇಶದಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಸುಪ್ರೀಂ ಕೋರ್ಟಿನ ಈ ಆದೇಶ ಶ್ಲಾಘನೀಯ. ಆದರೆ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್, ಕಿರಾಣಿ ಅಂಗಡಿ ಹಾಗೂ ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಕೆಲ ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳಲು ರಂಗೋಲಿ ಕೆಳಗೆ ತೂರುವ ಯತ್ನವನ್ನೂ ಮಾಡಿವೆ. ರಾಜ್ಯ ಹೆದ್ದಾರಿಗಳನ್ನು ಸಾಮಾನ್ಯ ಹೆದ್ದಾರಿಗಳಾಗಿ ಪರಿವರ್ತಿಸುವ ಕಾರ್ಯವೂ ನಡೆದಿದೆ. ರಾಜ್ಯ ಸರಕಾರಗಳು ಇಂಥ ಹೀನ ಕೆಲಸ ಮಾಡಲು ಮುಂದಾಗದೆ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಿ ಹಾಗೂ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನೂ ತಡೆಗಟ್ಟಲಿ. ಬಡ, ಮಧ್ಯಮ ವರ್ಗದ ಕುಟುಂಬವನ್ನು ರಕ್ಷಿಸಲಿ

  • ಸುಕೇತ್ ಸಾಲ್ಯಾನ್  ಪಡುಬಿದ್ರೆ