ಗ್ರಾಮೀಣ ಬ್ಯಾಂಕ್ ಕಳವು ಯತ್ನ

ಕಳ್ಳರು ಬಿಟ್ಟುಹೋದ ವಸ್ತುಗಳು,

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮುಳ್ಳೇರಿಯ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕೊಂದಕ್ಕೆ ಸೋಮವಾರ ರಾತ್ರಿ ಕಳ್ಳರು ನುಗ್ಗಿದ್ದು, ಆದರೆ ಪೇಟೆಯ ಕಾವಲುಗಾರ ಹಾಗೂ ಪರಿಸರ ನಿವಾಸಿಗಳ ಸಮಯಪ್ರಜ್ಞೆಯಿಂದ ಕಳವು ತಪ್ಪಿಹೋಗಿದೆ.

ಮುಳ್ಳೇರಿಯ-ಬದಿಯಡ್ಕ ರಸ್ತೆಯಲ್ಲಿ ಅರಮನಡ್ಕ ಕಾಂಪ್ಲೆಕ್ಸಿನಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ಗ್ರಾಮೀಣ ಬ್ಯಾಂಕ್ ಮುಳ್ಳೇರಿಯ ಶಾಖೆಯಲ್ಲಿ ಕಳವು ಯತ್ನ ನಡೆದಿದೆ.

ಸೋಮವಾರ ರಾತ್ರಿ 1.30ರ ವೇಳೆ ಕಳ್ಳರು ಬ್ಯಾಂಕಿಗೆ ನುಗ್ಗಿದ್ದು, ಕಟ್ಟಡದ ಒಂದನೇ ಮೇಲಂತಸ್ತಿನಲ್ಲಿ ಕಾರ್ಯಾಚರಿಸುವ ಬ್ಯಾಂಕಿಗೆ ಮೆಟ್ಟಿಲಿನ ಮೂಲಕ ಹತ್ತಿದ ಕಳ್ಳರು ಮೊದಲು ಹೊರಗಿನ ಸೈರನ್ ಉಪಕರಣವನ್ನು ಕಿತ್ತು ಎಸೆದಿದ್ದಾರೆ. ಬಳಿಕ ಕಿಟಿಕಿಯ ಗಾಜು ಮುರಿದು ಅದರ ಕಬ್ಬಿಣದ ಸರಳುಗಳನ್ನು ತುಂಡರಿಸಿ ಒಳಗೆ ಪ್ರವೇಶಿಸಿದ್ದಾರೆ. ಬ್ಯಾಂಕಿನೊಳಗೆ ನುಗ್ಗಿದ ಕಳ್ಳರು ನಗ-ನಗದು ಒಳಗೊಂಡ ಭದ್ರತಾ ಕೊಠಡಿಯ ಬಾಗಿಲು ಮುರಿಯಲು ಯತ್ನಿಸುವಷ್ಟರಲ್ಲಿ ಬ್ಯಾಂಕಿನೊಳಗಿರುವ ಮತ್ತೊಂದು ಸೈರನ್ ಮೊಳಗಲಾರಂಭಿಸಿದ್ದು, ಈ ಶಬ್ಚ ಕೇಳಿ ಪೇಟೆಯ ಕಾವಲುಗಾರ ಹಾಗೂ ಪರಿಸರ ನಿವಾಸಿಗಳು ಅಲ್ಲಿಗೆ ತಲಪುವಷ್ಟರಲ್ಲಿ ಕಳ್ಳರು ಓಡಿ ಪರಾರಿಯಾಗಿದ್ದಾರೆ.

ಕಳ್ಳರ ತಂಡದಲ್ಲಿ ಎಷ್ಟು ಮಂದಿ ಇದ್ದರೆಂದು ತಿಳಿದುಬಂದಿಲ್ಲ. ವಿಷಯ ತಿಳಿದು ಪೆÇಲೀಸರು ಬ್ಯಾಂಕಿಗೆ ಕಾವಲು ನಿಂತಿದ್ದು, ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಬಂದ ಬಳಿಕ ಒಳಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಿಟಿಕಿ ಸರಳು, ಭದ್ರತಾ ಕೊಠಡಿ ಮುರಿಯಲೆಂದು ಕಳ್ಳರು ತಂದಿದ್ದ ಕಬ್ಬಿಣದ ಎರಡು ಬೃಹತ್ ಸರಳುಗಳು, ಒಂದು ಗೋಣಿ ಚೀಲ ಬ್ಯಾಂಕಿನೊಳಗೆ ಬಿಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬ್ಯಾಂಕಿನಲ್ಲಿ ಸೀಸಿಟೀವಿ ಅಳವಡಿಸಲಾಗಿದ್ದು, ಅದರಲ್ಲಿ ಒಳಗೊಂಡ ದೃಶ್ಯಗಳನ್ನು ಪರಿಶೀಲಿಸಿ ಕಳ್ಳರ ಗುರುತು ಪತ್ತೆಹಚ್ಚಬಹುದೆಂಬ ನಿರೀಕ್ಷೆಯನ್ನು ಪೆÇಲೀಸರು ವ್ಯಕ್ತಪಡಿಸಿದ್ದಾರೆ. ಶ್ವಾನದಳ ಸ್ಥಳಕ್ಕೆ ಬಂದು ತಪಾಸಣೆ ಮುಂದುವರಿಸಿದೆ. ಕಳವು ಯತ್ನ ಸಂಬಂಧ ಬ್ಯಾಂಕ್ ಮೆನೇಜರ್ ನೀಡಿದ ದೂರಿನಂತೆ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.