ಪೊಲೀಸ್ ಗೂಢಾಚಾರಿಣಿ’ ಎಂಬ ಶಂಕೆಯಿಂದ ಮಹಿಳೆಗೆ ಮಾರಣಾಂತಿಕ ಹಲ್ಲೆ

Beautiful eyes of an Indian woman behind sari

ಹಾಸನ : ಅಕ್ರಮ ಮರಳು ಸಾಗಾಟ, ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ, ಡೀಸೆಲ್ ಕಳವು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾಳೆ ಎನ್ನುವ ಶಂಕೆಯಿಂದ ಮಹಿಳೆಯೊಬ್ಬಳ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಈ ಮಹಿಳೆಯ ಆರೋಗ್ಯವನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ವಿಚಾರಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

“ಹಾಸನ ಜಿಲ್ಲಾ ಎಸ್ಪಿ ರವಿ ಡಿ ಚೆನ್ನಣ್ಣವರ ಅವರಿಗೆ ನಾನು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ  ಮರದ ಸೋಂಟೆ, ಪೈಪುಗಳಿಂದ ಹಲ್ಲೆ ನಡೆಸಿದ್ದಾರೆ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧ ದೂರು ನೀಡಲಿ. ಆದರೆ ಕಾನೂನು ಕೈಗೆತ್ತಿಕೊಂಡು ನನ್ನ ಮೇಲೆ ನಾನು ಪ್ರಜ್ಞೆ ತಪ್ಪುವವರೆಗೂ ಹಲ್ಲೆ ನಡೆಸಿದ್ದಾರೆ” ಎಂದು ಮಹಿಳೆ ದೂರಿದ್ದಾರೆ.