ಸಭೆಯಲ್ಲಿ ಯುವತಿಗೆ ಹಲ್ಲೆ

ಯುವತಿಯ ಮೇಲೆ ಹಲ್ಲೆ

ಯಲ್ಲಾಪುರ : ತಾಲೂಕಿನ ಬಂಕೊಳ್ಳಿಯಲ್ಲಿ ರವಿವಾರ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವತಿಯೊಬ್ಬಳ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ್ದಾರೆ.

ಇಂದಿರಾ ಪಿ ಗೌಡ ಮರಹಳ್ಳಿ ಎಂಬಾಕೆ ಹಲ್ಲೆಗೊಳಗಾದ ಯುವತಿ. “ಬಂಕೊಳ್ಳಿಯಲ್ಲಿ ಸ್ಥಳೀಯ ಶಾಲೆಯ ಶಿಕ್ಷಕರಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಸಭೆಯಲ್ಲಿ ನಾನು ಮಾತನಾಡುವ ಸಂದರ್ಭದಲ್ಲಿ ಹಳೆ ದ್ವೇಷ ಹೊಂದಿದ್ದ ಸ್ಥಳೀಯ ಮಹಿಳೆ ಹೇಮಾವತಿ ನಂದ ಕುಣಬಿ ಇವಳು ಬೆನ್ನಿನ ಮೇಲೆ ಹೊಡೆದು ಹೊರಕ್ಕೆ ನಡೆ ಎಂದು ದೂಡಿದಳು. ಆ ಸಂದರ್ಭದಲ್ಲಿ ನಾನು ಸಭಾಭವನದ ಮೆಟ್ಟಿಲ ಮೇಲೆ ನಿಂತಾಗ ಬೇಬಿ ಸೋಮೇಶ್ವರ ಗೌಡ ಎಂಬವಳು ತಂತಿಯಿಂದ ಹೊಡೆದಿದ್ದಾಳೆ. ಸೋಮೇಶ್ವರ ಗೌಡ ಎಂಬಾತ ಮನೆಯ ಬಳಿ ಬಂದು ಜೀವ ಬೆದರಿಕೆ ಹಾಕಿದ್ದಾನೆ” ಎಂದು ಇಂದಿರಾ ಪಿ ಗೌಡ ದೂರಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.