ಹೆಣ್ಣನ್ನು ದೇವತೆಗೆ ಹೋಲಿಸಿ ಅಂಥದ್ದೊಂದು ನಂಬಿಕೆ ನಿಜವೇ

ನಮ್ಮ ದೇಶದಲ್ಲಿ ಹೆಣ್ಣನ್ನು ದೇವತೆಗಳಿಗೆ ಹೋಲಿಸಿ ಗೌರವ ನೀಡುವ ಪರಿಪಾಠ ಇದೆ  ಆದರೆ ಸದ್ಯ ನಡೆಯುತ್ತಿರುವ ಅಹಿತಕರ ಘಟನೆಗಳಿಂದಾಗಿ ಇದು ಅಪಹಾಸ್ಯಕ್ಕೊಳಗಾಗಿದೆ  ಹೆಣ್ಣನ್ನು ಕಾಲಕಸದಂತೆ ನೋಡುವ ಜೊತೆಗೆ  ನಾನಾ ಬಗೆಯ ಕಿರುಕುಳ ನೀಡುವ ಸರಣಿ ಘಟನೆಗಳು ಸುರಕ್ಷತೆಯ ಜೊತೆಗೆ ಸಹಜೀವಿಗಳಾದ ಪುರುಷರ ಬಗ್ಗೆ ಅಸಹನೆ ಮತ್ತು ಅಪನಂಬಿಕೆ ಬೆಳೆಯಲು ಕಾರಣವಾಗಿದೆ  ಶಾಲಾ ಕಾಲೇಜು  ಹೋಟೆಲ್  ಬಸ್ಸುಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಮರೀಚಿಕೆ ಎಂಬಂತಾಗಿರುವುದು ನಿಜಕ್ಕೂ ವಿಪರ್ಯಾಸ  ಕಾಲ ಬದಲಾದಂತೆ ಹೆಣ್ಣು ಹೆಚ್ಚು ಸಮಾನತೆ ಬಯಸಿದಂತೆ ಆಕೆಯ ಮನಸ್ಥೈರ್ಯ ಕುಂದಿಸುವ ಇಂಥ ಘಟನೆಗಳೂ ಹೆಚ್ಚುತ್ತಿರುವುದು ಅವಳಿಗೂ ಇನ್ನೂ ಶೋಷಣೆ ತಪ್ಪಿಲ್ಲ ಎಂಬುದನ್ನೇ ಸೂಚಿಸುತ್ತಿದೆ  ಈ ಬಗ್ಗೆ ಗಂಭೀರ ಚರ್ಚೆ ಜೊತೆಗೆ ಕಠಿಣ ಕ್ರಮಗಳು ಅತ್ಯವಶ್ಯ

  • ಟಿ ಅಜಿತ್ ಸುವರ್ಣ  ಹೆಜಮಾಡಿ